ಉದಯವಾಹಿನಿ, ಬೆಂಗಳೂರು: ಮಳೆಯಿಂದಾಗಿ ನೀರು ತುಂಬಿಕೊಂಡಿದ್ದ ಅಂಡರ್ಪಾಸ್ನಲ್ಲಿ ಕಾರು ಸಿಕ್ಕಿಕೊಂಡು ತೊಂದರೆಗೀಡಾಗಿ ಅಸ್ವಸ್ಥಗೊಂಡಿದ್ದವರೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯರು ಮತ್ತು ಸಿಬ್ಬಂದಿ ಹಿಂದೇಟು ಹಾಕಿದ್ದರಿಂದ ಅವರು ಆಸ್ಪತ್ರೆಯಲ್ಲೇ ಅನ್ಯಾಯವಾಗಿ ಸಾವಿಗೀಡಾಗಿದ್ದಾರೆ.ಸಾವಿಗೀಡಾದ ಮಹಿಳೆ ಇನ್ಫೊಸಿಸ್ ಉದ್ಯೋಗಿ, ಹೈದರಾಬಾದ್ ಮೂಲದ ಭಾನುರೇಖಾ (22) ಎಂದು ತಿಳಿದುಬಂದಿದೆ.
