
ಉದಯವಾಹಿನಿ, ಬೆಂಗಳೂರು, : ಕೇಂದ್ರದ 5 ಕೆಜಿಗೆ 5 ಕೆಜಿ ಸೇರಿಸಿದರೆ ನಿಮ್ಮದು 5 ಕೆಜಿ ಆಗಲಿದೆ. 10 ಕೆಜಿ ಆಗುವುದಿಲ್ಲ. ಮಾತು ಕೊಟ್ಟಂತೆ ನಡೆಯುವುದಾದರೆ 15 ಕೆಜಿ ಕೊಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ್ ಹೇಳಿದ್ದಾರೆ.ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರಮಾಣವಚನ ಸ್ವೀಕಾರದ ಬಳಿಕ ಗ್ಯಾರಂಟಿಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿ ಅನುಷ್ಠಾನಕ್ಕೆ ತರುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುವುದಾಗಿ ತಿಳಿಸಿದ್ದೀರಿ. ಕೇಂದ್ರ ಈಗಾಗಲೇ 5 ಕೆಜಿ ಅಕ್ಕಿ ಕೊಡುತ್ತಿದೆ. ಬಸವರಾಜ ಬೊಮ್ಮಾಯಿ ಅವರು ಒಂದು ಕೆಜಿ ಅಕ್ಕಿ ಸೇರಿಸಿ 6 ಕೆಜಿ ಕೊಡುತ್ತಿದ್ದರು. 6 ಕೆಜಿ ಜೊತೆ ನಿಮ್ಮ 10 ಕೆಜಿ ಸೇರಿಸಿ 16 ಕೆಜಿ ಕೊಡುತ್ತೀರಾ ಅಥವಾ ಮೋದಿಯವರ 5 ಕೆಜಿಗೆ 5 ಕೆಜಿ ಸೇರಿಸಿ 10 ಕೆಜಿ ಕೊಡುತ್ತೀರಾ ಎಂದು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.ಕೇಂದ್ರದ 5 ಕೆಜಿಗೆ 5 ಕೆಜಿ ಸೇರಿಸಿದರೆ ನಿಮ್ಮದು 5 ಕೆಜಿ ಆಗಲಿದೆ. 10 ಕೆಜಿ ಆಗುವುದಿಲ್ಲ. ಮಾತು ಕೊಟ್ಟಂತೆ ನಡೆಯುವುದಾದರೆ 15 ಕೆಜಿ ಕೊಡಬೇಕು. ಈ ಕುರಿತು ಬಿಜೆಪಿ ನಿಮ್ಮಿಂದ ತಕ್ಷಣ ಸ್ಪಷ್ಟನೆ ಬಯಸುತ್ತದೆ ಎಂದು ತಿಳಿಸಿದರು. ಜನರನ್ನು ದಾರಿತಪ್ಪಿಸುವ ಕೆಲಸ ಮಾಡಬೇಡಿ ಎಂದು ಅವರು ತಿಳಿಸಿದರು.
