
ಉದಯವಾಹಿನಿ, ಮುನವಳ್ಳಿ : ಪಟ್ಟಣದ ಐತಿಹಾಸಿಕ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇರುವ ಪಂಚ ಲಿಂಗಗಳಿಗೆ ಸೊಮವಾರ ಲೊಕ ಕಲ್ಯಾಣಾರ್ಥವಾಗಿ ಪ್ರತಿವರ್ಷದಂತೆ ಈ ವರ್ಷವೂ ಬೆಳಗ್ಗೆ 6 ಗಂಟೆ ಅಭಿಷೇಕದ ನಂತರ ಮಂತ್ರಗೋಷ ದೊಂದಿಗೆ ಭಕ್ತರಿಂದ ಬಿಲ್ವಾರ್ಚನೆ ಪ್ರಾರಂಭವಾಗಿ ಸಂಜೆ 6 ಗಂಟೆ ವರೆಗು ಸರದಿಯಲ್ಲಿ ಬಂದು ಭಕ್ತರು ಸೇವೆ ಸಲ್ಲಿಸಿದರು ಸಂಜೆ ಪಾಲಿಕೋತ್ಸವ ದೊಂದಿಗೆ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮ ಮುಕ್ತಾಯಗೊಂಡು. ಬಿಲ್ವಾರ್ಚನೆ ಕಮಿಟಿಯವರಿಂದ ದಿನವಿಡಿ ಮಹಾಪ್ರಸಾದ ವಿತರಣೆ ಜರುಗಿತು.
ಪಂಚು ಚಂದರಗಿ, ಈರಯ್ಯ ಮಠಪತಿ, ಶಿಂಗಯ್ಯಾ ಹಿರಮಠ, ಚಿನ್ನಪ್ಪಾ ಗೋಕಾಕ, ಶ್ರೀಶೈಲ ಹಿರೆಮಠ, ಕಮಿಟಿ ಸದಸ್ಯರು ಉಪಸ್ಥಿತರಿದ್ದರು.
