ಉದಯವಾಹಿನಿ, ನಾರಾಯಣಪುರ: ‘ಗರ್ಭದಲ್ಲಿನ ಮಗು ಆರೋಗ್ಯಯುತವಾಗಿ ಬೆಳವಣಿಗೆ ಹೊಂದಲು ಗರ್ಭೀಣಿಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು’ ಎಂದು ಆಶಾ ಸುಗಮಕಾರರಾದ ಈರಮ್ಮ ಹೇಳಿದರು.
ಸ್ಥಳೀಯ ಅಂಗನವಾಡಿ ಕೇಂದ್ರ-2 ರಲ್ಲಿ ಮಂಗಳವಾರ ನಡೆದ ಆರೋಗ್ಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.’ಬಾಣಂತಿಯರು ಪೌಷ್ಟಿಕ ಆಹಾರ ಸೇವನೆ ಮಾಡಬೇಕು, ಮಗುವಿನ ಬೆಳವಣಿಗೆಗೆ ಸ್ತನ್ಯಪಾನ ಮಾಡಿಸಬೇಕು. ಸೊಳ್ಳೆ ಉತ್ಪತ್ತಿಯಾಗದಂತೆ, ಎಲ್ಲೆಂದರಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವದರಿಂದ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ತಡೆಯಬಹುದು’ ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆ ನಾಗಮ್ಮ ಕೋಳೂರ, ಸಂಗಮೇಶ ಕೂಲಬಾವಿ, ಈರಣ್ಣ ಪತ್ತಾರ, ಶಕುಂತಲಾ ಹಿರೇಮಠ, ಅನ್ನಪೂರ್ಣ, ರೇಣುಕಾ, ನೀಲಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
