ಉದಯವಾಹಿನಿ, ಬೆಂಗಳೂರು : ನನ್ನನ್ನು ಕೆಣಕಬೇಡ ಶಿವಕುಮಾರ್ ಎಂದು ಡಿಸಿಎಂ ಡಿಕೆಶಿ ಅವರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದ್ದಾರೆ.ಹೆಚ್ಡಿಕೆ ವಿರುದ್ಧ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆಂದು ಡಿಕೆಶಿ ಅವರು ವಾಗ್ದಾಳಿ ನಡೆಸಿದ್ದಕ್ಕೆ, ಇದೀಗ ಹೆಚ್ಡಿಕೆ ತಿರುಗೇಟು ನೀಡಿದ್ದು, ನನ್ನ ಬಳಿಯೂ ಸಾಕಷ್ಟು ಮೆಟಿರಿಯಲ್ಗಳು ಬರುತ್ತವೆ.
ಅವುಗಳನ್ನು ಆಚೆ ತಗೆದರೆ ಭೂಮಿ ಮೇಲೆ ಬದುಕೋಕೆ ಆಗಲ್ಲ. ನಿಮ್ಮ ಕತೆ ಅಸ್ಟೇ ಎಂಬಂತೆ ಹೆಚ್ಡಿಕೆ ವಾರ್ನಿಂಗ್ ಮಾಡಿದ್ದಾರೆ.
ಇನ್ನು ಹೆಚ್.ಡಿ.ರೇವಣ್ಣನ ಮಗನನ್ನು ಒಳಗೆ ಹಾಕಿಸಲು ಏನೇನು ಮಾಡಬೇಕೋ ಅದನ್ನೆಲ್ಲಾ ಮಾಡಿದ್ದೀರಿ. ಅದೇ ರೀತಿ ನಿಮ್ಮಲ್ಲಿ ಯಾರನ್ನು ಜೈಲಿಗೆ ಕಳುಹಿಸಬೇಕೋ, ಅವರನ್ನು ಕಳುಹಿಸಲು ಆ ಭಗವಂತೆ ಈಗಾಗಲೇ ನಿರ್ಧಾರ ಮಾಡಿದ್ದಾನೆ. ಆಗ ಯಾವ ರಕ್ಷಣೆ ಪಡೆದರೂ ನೀವು ಉಳಿಯೋಕೆ ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ. 14 ವರ್ಷಗಳ ಹಿಂದಿನ ಕೇಸ್ ಹಿಡಿದುಕೊಂಡು ಅದೇನೋ ಅಲ್ಲಾಡಿಸೋಕೆ ಈಗ ನಿಂತಿದ್ದೀರಿ. ನಾವೂ ಎಲ್ಲದಕ್ಕೂ ಸಿದ್ಧವಾಗಿದ್ದೇವೆ ಎಂದು ಹೆಚ್ಡಿಕೆ ಕೌಂಟರ್ ಕೊಟ್ಟಿದ್ದಾರೆ.
