ಉದಯವಾಹಿನಿ , ಸಾಗರ: ತಾಲ್ಲೂಕಿನ ಸಸರವಳ್ಳಿ- ಗಾಡಿಗೆರೆ ಗ್ರಾಮದ ಸಮೀಪ ಗಾಳಿ ಮಳೆಗೆ ವಿದ್ಯುತ್ ತಂತಿ ಹರಿದು ಮರ ಗಿಡಗಳ ಮೇಲೆ ಬಿದ್ದಿದೆ. ಇದರಿಂದಾಗಿ ವಿದ್ಯುತ್ ಪೂರೈಕೆಗೆ ತೊಂದರೆ ಉಂಟಾಗುತ್ತಿದ್ದು, ಮೆಸ್ಕಾಂ ಕ್ರಮ ಕೈಗೊಳ್ಳಬೇಕಿದೆ.
ಈ ಭಾಗದ ವಿದ್ಯುತ್ ತಂತಿ ಹಳೆಯದಾಗಿದ್ದು, ವಿದ್ಯುತ್ ಪರಿವರ್ತಕಗಳಿಗೂ ತೊಂದರೆ ಉಂಟಾಗುತ್ತಿದೆ. ಮರ- ಗಿಡಗಳ ಮೇಲೆ ವಿದ್ಯುತ್ ತಂತಿ ಬಿದ್ದಿರುವುದರಿಂದ ಅಪಾಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಹಳೆಯ ತಂತಿಗಳನ್ನು ತೆರವುಗೊಳಿಸಿ ಹೊಸ ತಂತಿಗಳನ್ನು ಅಳವಡಿಸಬೇಕು. ಮಹಾಬಲ ಗಿರಿ, ಜಿ.ಆರ್, ಶಂಕರ್, ಗಣಪತಿ, ರಮೇಶ್, ರಾಜಾರಾಮ್, ಲಕ್ಷ್ಮಿನಾರಾಯಣ, ದತ್ತಮೂರ್ತಿ, ಸಸರವಳ್ಳಿ- ಗಾಡಿಗೆರೆ ಗ್ರಾಮಸ್ಥರು.
