ಉದಯವಾಹಿನಿ, ಬೆಂಗಳೂರು : ಈಕೆ, ಅಂತಿಂತ ಲೇಡಿ ಅಲ್ಲ..! ಖತರ್ನಾಕ್ ಲೇಡಿ..! ಜಸ್ಟ್ ಒಂದು ಮಿಸ್ ಕಾಲ್’ ನಲ್ಲೇ ಪಟಾಯಿಸಿ ರೂಂಗೆ ಕರಿತಾಳೆ..! ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದ ‘ಖತರ್ನಾಕ್ ಲೇಡಿ’ ಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಹೌದು, ಮದುವೆಯಾಗಿ ಮಕ್ಕಳಿದ್ದರೂ ಐಷಾರಾಮಿ ಜೀವನಕ್ಕಾಗಿ ಯುವಕರಿಗೆ ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಲೇಡಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾಳೆ.
ಮಿಸ್ ಕಾಲ್ ಕೊಟ್ಟು ಯುವಕರನ್ನು ಬೀಳಿಸಿಕೊಂಡು ತನ್ನ ಸಂಪಿಗೆಹಳ್ಳಿ ಮನೆಗೆ ಕರೆಸಿಕೊಂಡು ಯುವಕರ ಜೊತೆ ಸಲುಗೆಯಿಂದ ವರ್ತಿಸುತ್ತಿದ್ದಳು. ಆ ಕ್ಷಣಕ್ಕೆ ಅಲ್ಲಿಗೆ ಬರುವ ಗ್ಯಾಂಗ್ ಯುವಕರಿಗೆ ಧಮ್ಕಿ ಹಾಕಿ ಹಣ ಕೊಡುವಂತೆ ಪೀಡಿಸುತ್ತಿದ್ದರು. ಇಲ್ಲವಾದಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದರು. ಇಂತಹ ಕೃತ್ಯ ಎಸಗಿ ವಂಚಿಸುತ್ತಿದ್ದ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಬಂಧಿತರನ್ನು ನಜ್ಮಾ ಕೌಸರ್, ಮಹಮ್ಮದ್ ಆಶಿಕ್, ಖಲೀಲ್ ಎಂದು ಗುರುತಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!