ಉದಯವಾಹಿನಿ, ದೇಶಾದ್ಯಂತ ಇಂದು ರಕ್ಷಾ ಬಂಧನ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಣ್ಣ-ತಂಗಿಯರ ಬಾಂಧವ್ಯದ ಮಹತ್ವವನ್ನು ಸಾರುವ ಈ ಹಬ್ಬದಂದು ಸಹೋದರಿಯರು ಸಹೋದರನಿಗೆ ರಕ್ಷಾ ಬಂಧನ ಕಟ್ಟುತ್ತಾರೆ. ರಕ್ಷಾ ಬಂಧನದ ಈ ದಿನ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ತುಂಬಾ ವಿಶೇಷ.ಪುಟಾಣಿ ಮಕ್ಕಳು ಪ್ರಧಾನಿಯವರಿಗೆ ರಾಖಿ ಕಟ್ಟಿ ಸಂಭ್ರಮಿಸುತ್ತಾರೆ. ರಕ್ಷಾ ಬಂಧನ ಹಿನ್ನೆಲೆಯಲ್ಲಿ ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ದೆಹಲಿಯ ಶಾಲಾ ಮಕ್ಕಳು ರಾಖಿ ಕಟ್ಟಿ ಶುಭ ಕೋರಿದ್ದಾರೆ. ಪುಟ್ಟ ಪುಟ್ಟ ಮಕ್ಕಳು ಸಾಲು ಸಾಲಾಗಿ ಬಂದು ಪ್ರಧಾನಿ ಮೋದಿಯವರಿಗೆ ರಾಖಿ ಕಟ್ಟಿದ್ದು, ಮೋದಿಯವರ ಕೈ ರಾಖಿಗಳಿಂದ ತುಂಬಿದೆ. ಮಕ್ಕಳೊಂದೊಗೆ ಪ್ರಧಾನಿ ಮೊದಿ ಕೆಲ ಕಾಲ ಕಳೆದು ಸಂತಸ ವ್ಯಕ್ತಪಡಿಸಿದ್ದಾರೆ.
ರಕ್ಷಾ ಬಂಧನದ ಹಬ್ಬದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪುಟಾಣಿಗಳು ಆಗಮಿಸಿ ರಾಖಿ ಕಟ್ಟಿದ ವಿಶೇಷ ಸಂದರ್ಭದ ವಿಡಿಯೋವನ್ನು ಪ್ರಧಾನಿ ಮೋದಿ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
