ಉದಯವಾಹಿನಿ,ಬೆಂಗಳೂರು: ಡಿಕೆ ಶಿವಕುಮಾರ್ ಪೊಲೀಸ್ ಠಾಣೆಗಳನ್ನು ಹಸರೀಕರಣ ಮಾಡುತ್ತಾರಾ? ಪಾಕಿಸ್ತಾನ ಮಾಡಲು ಹೊರಟಿದ್ದಾರ. ಕೇಸರಿ ಈ ಧರ್ಮದ ದೇಶದ ಸಂಕೇತವಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ವಿರುದ್ದ ವಾಗ್ದಾಳಿ ಮಾಡಿದ್ದಾರೆ.ತುಮಕೂರು ಜಿಲ್ಲೆ, ಕ್ಯಾತಸಂದ್ರ ಠಾಣೆಯ ಎಲ್ಲಾ ಸಿಬ್ಬಂದಿ ಕೇಸರಿ ಶರ್ಟ್, ಬಿಳಿ ಪಂಚೆ ತೊಟ್ಟು ಒಟ್ಟಿಗೆ ಸೇರಿ ಫೋಟೋ ತಗೆಗೆಸಿಕೊಂಡಿದ್ದರು. ಈ ಫೋಟೋ ವೈರಲ್​ ಆಗಿತ್ತು.
ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡಲು ಹೊರಟಿದ್ದೀರಾ ನೀವು? ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ, ಪೊಲೀಸ್ ಅಧಿಕಾರಿಗಳನ್ನು ತರಾಟೆ ಡಿಸಿಎಂ ತೆಗೆದುಕೊಂಡರು.ಈ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಡಿ.ಕೆ ಶಿವಕುಮಾರ್ ಪೊಲೀಸ್ ಠಾಣೆಗಳನ್ನ ಹಸರೀಕರಣ ಮಾಡುತ್ತಾರಾ? ಪಾಕಿಸ್ತಾನ ಮಾಡಲು ಹೊರಟಿದ್ದಾರ?. ಕೇಸರಿ ಈ ಧರ್ಮದ ದೇಶದ ಸಂಕೇತವಾಗಿದೆ. ಪೊಲೀಸರು ಕೇಸರಿಶಾಲು ಹಾಕ್ಕೊಂಡ್ರೆ ತಪ್ಪೇನಿದೆ? ಎಂದು ಕಾಂಗ್ರೆಸ್​​ಗೆ ಪ್ರಶ್ನೆ ಮಾಡಿದ್ದಾರೆ.ಕೇಸರಿಯನ್ನು ವಿರೋಧ ಮಾಡಿದ್ರು ಉಳಿಗಾಲವಿಲ್ಲ. ಗ್ಯಾರಂಟಿ ಕಾರ್ಡಗಳಿಂದ ಆರಿಸಿ ಬಂದಿದ್ದಾರೆ. ಶೀಘ್ರದಲ್ಲೇ ಗ್ಯಾರಂಟಿ ಕಾರ್ಡಗಳು ಮುಗಿಯುತ್ತವೆ. 2024ಕ್ಕೆ ಮತ್ತೆ ಮೋದಿ ಪ್ರಧಾನಿಯಾಗಲಿದ್ದಾರೆ ದೇಶ ಹಿಂದೂ ದೇಶವಾಗಲಿದೆ. ಇಂತಹ ನೂರು ಡಿಕೆ ಶಿವಕುಮಾರ್​ಗಳು ಬಂದ್ರು ಏನು ಆಗೋದಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!