ಉದಯವಾಹಿನಿ,ಬೆಂಗಳೂರು: ರಾಷ್ಟ್ರಪತಿ ಹೊರತಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಲು ಸಾಧ್ಯವಿಲ್ಲ. ಆದರೆ ದುರಾದೃಷ್ಟವಶತಾ, ಕೇಂದ್ರ ಸರ್ಕಾರ ಆರ್ ಎಸ್‌ಎಸ್ ಮಾರ್ಗದರ್ಶನದಲ್ಲಿ ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಶೋಷಿತ ಸಮುದಾಯದಿಂದ ಬಂದಿರುವ ರಾಷ್ಟ್ರಪತಿಗಳನ್ನು ಸಂಸತ್ ಭವನಗ ಕಾರ್ಯಕ್ರಮಗಳಿಗೆ ಆಹ್ವಾನ ನೀಡದೇ ಅಪಮಾನ ಮಾಡುತ್ತಿವೆ.
ಇದು ಸಂವಿಧಾನಕ್ಕೆ ಮಾಡುವ ಅಪಚಾರ. ಹಾಗೂ ರಾಷ್ಟ್ರಪತಿ ಹುದ್ದೆಗೆ ಅಪಮಾನವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಪ್ರಧಾನಮಂತ್ರಿಗಳು ಅಪಚಾರ ಎಸಗಿದ್ದಾರೆ ಎಂಬುದಾಗಿ ಕಾಂಗ್ರೆಸ್ ನಾಯಕ ವಿ.ಎಸ್ ಉಗ್ರಪ್ಪ ಕಿಡಿಕಾರಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, 97 ವರ್ಷಗಳ ಹಿಂದೆ ಹಾಲಿ ಸಂಸತ್ ಭವನವನ್ನು 83 ಲಕ್ಷ ರೂ.ಗಳಲ್ಲಿ ನಿರ್ಮಿಸಲಾಗಿತ್ತು. ಜ.18, 1927 ರಂದು ಆಗಿನ ವೈಸ್ ರಾಯ್ ಲಾರ್ಡ್ ಇರ್ವಿನ್ ಉದ್ಘಾಟನೆ ಮಾಡಿದ್ದರು. ಆಗ ಸಂಸತ್ತಿನಲ್ಲಿ ಉಭಯ ಸದನಗಳಲ್ಲಿ 790 ಹಾಸನಗಳ ಸಾಮರ್ಥ್ಯವಿತ್ತು. ಇದನ್ನು ವಿನ್ಯಾಸ ಮಾಡಿದ್ದ ಸರ್ ಎಡ್ವಿನ್ ಲುಟಿನ್ಸ್ ಹಾಗೂ ಸರ್ ಅರ್ಬರಕರ್ ಎಂಬುವವರು. ಇಂದು ಬದಲಾದ ಸನ್ನಿವೇಷದಲ್ಲಿ ಸಂಸತ್ ಸದಸ್ಯರಿಗೆ ಸ್ಥಳದ ಕೊರತೆ ಇದೆ ಎಂದು ನೂತನ ಸಂಸತ್ ನಿರ್ಮಾಣಕ್ಕೆ ಡಿ.10, 2020ರಲ್ಲಿ ಶಂಕುಸ್ಥಾಪನೆ ಮಾಡಿ ನೂತನ ಭವನ ನಿರ್ಮಿಸಲಾಗುತ್ತಿದೆ ಎಂದರು.

Leave a Reply

Your email address will not be published. Required fields are marked *

error: Content is protected !!