ಉದಯವಾಹಿನಿ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ನಮ್ಮ ಮನಸ್ಸಿಗೆ ತುಂಬಾ ಮುದ ನೀಡುತ್ತವೆ. ಸದ್ಯ ಅಂತಹದೊಂದು ವಿಡಿಯೋ ಇದೀಗ ವೈರಲ್ ಆಗಿದ್ದು, ಇಲ್ಲೊಬ್ರು ರೈತ ಹೊಲದಲ್ಲಿ ಕೆಲಸ ಮಾಡಿ ದಣಿದು ಬಂದ್ರೂ ಕೂಡಾ ಸುಸ್ತಾಗಿ ಕೂರದೆ, ಮನಸ್ಸನ್ನು ಸಂತೋಷಪಡಿಸುವುದು ತುಂಬಾ ಮುಖ್ಯ ಎನ್ನುತ್ತಾ ಮಕ್ಕಳೊಂದಿಗೆ ಮಕ್ಕಳಾಗಿ ಬಹಳ ಉತ್ಸಾಹದಿಂದ ಕ್ರಿಕೆಟ್ ಆಡಿದ್ದಾರೆ.
ಈ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.
ಕ್ರಿಕೆಟ್ ಆಟ ಹೆಚ್ಚಿನವರ ನೆಚ್ಚಿನ ಕ್ರೀಡೆ ಅಂತಾನೇ ಹೇಳ್ಬಹುದು. ಅದರಲ್ಲೂ ನಮ್ಮ ದೇಶದಲ್ಲಿ ಎಲ್ಲಾ ವಯೋಮಾನದವರು ಕೂಡಾ ಈ ಆಟವನ್ನು ಆಡುತ್ತಾರೆ. ಹುಡುಗರಂತೂ ಸಂಜೆ ಕೆಲಸ ಬಿಟ್ಟು ಬಂದು ಅಥವಾ ಶಾಲೆ ಬಿಟ್ಟ ಬಳಿಕ ಗಲ್ಲಿ ಕ್ರಿಕೆಟ್ ಆಡುತ್ತಾ ಎಂಜಾಯ್ ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ರು ರೈತ ಕೂಡಾ ಹುಡುಗರಿಗಿಂತ ನಾನೇನು ಕಮ್ಮಿಯಿಲ್ಲ ಎನ್ನುತ್ತಾ, ಹೊಲದಲ್ಲಿ ಕೆಲ್ಸ ಮಾಡಿ ದಣಿದು ಬಂದಿದ್ರೂ ಕೂಡಾ, ಮಕ್ಕಳ ಜೊತೆ ಮಕ್ಕಳಾಗಿ ಕ್ರಿಕೆಟ್ ಆಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅನ್ನದಾತನ ಕ್ರಿಕೆಟ್ ಆಟಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.ಈ ಕುರಿತ ಪೋಸ್ಟ್ ಒಂದನ್ನು ಡಾ. ವಿಠ್ಠಲ್ ರಾವ್ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಹೊಲದಲ್ಲಿ ದಣಿದು ಬಂದ್ರು ಕ್ರಿಕೆಟ್ ಆಡೋಕೆ ಎನ್ ಖುಷಿ ಅಲ್ವಾ ನಮ್ಮ ಅನ್ನದಾತರಿಗೆ…’ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಹೊಲದಲ್ಲಿ ಕೆಲಸ ಮುಗಿಸಿ ಸುಸ್ತಾಗಿ ಸಂಜೆ ಮನೆ ಕಡೆ ಬರುವಾಗ ರೈತರೊಬ್ಬ ಮಕ್ಕಳು ಗಲ್ಲಿ ಕ್ರಿಕೆಟ್ ಆಡುವುದನ್ನು ಕಂಡು ಖುಷಿಯಿಂದ ಸುಸ್ತನ್ನೆಲ್ಲಾ ಮರೆತು ತಾವು ಕೂಡಾ ಮಕ್ಕಳೊಂದಿಗೆ ಮಕ್ಕಳಾಗಿ ಕ್ರಿಕೆಟ್ ಆಡಿದ ಸುಂದರ ದೃಶ್ಯವನ್ನು ಕಾಣಬಹುದು.

Leave a Reply

Your email address will not be published. Required fields are marked *

error: Content is protected !!