ಉದಯವಾಹಿನಿ, ಬೆಂಗಳೂರು : ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘದವತಿಯಿಂದ ಯಲಹಂಕ ಉಪನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ೧೫ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆ ಯಲ್ಲಿ ಹಲವು ನಿರ್ಣಯಗಳನ್ನು ಮಂಡಿಸಿ, ಅಂಗೀಕಾರ ಪಡೆಯಲಾಯಿತು. ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಮುನಿರೆಡ್ಡಿ, ಸಹಕಾರಿಯ ಸದಸ್ಯರ ಸಂಖ್ಯೆ ವರ್ಷಕಳೆದಂತೆ ಹೆಚ್ಚಾಗುತ್ತಿದ್ದು, ಈಗ ೫೮೦೦ರ ಗಡಿಯನ್ನು ದಾಟಿದೆ. ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ೧೦೬.೫೪ ಲಕ್ಷ.ರೂ ಠೇವಣಿ ಹೊಂದಿದ್ದು, ಸದಸ್ಯರಿಗೆ ವಿವಿಧ ರೂಪದಲ್ಲಿ ೮೧.೭೭ ಲಕ್ಷ.ರೂ ಸಾಲ ನೀಡಿ, ೨.೮೮ ಲಕ್ಷ ರೂ. ನಿವ್ವಳ ಲಾಭದೊಂದಿಗೆ ಪ್ರಗತಿಯ ಹಾದಿಯಲ್ಲಿದೆ ಎಂದರು. ಸಹಕಾರಿಯ ವತಿಯಿಂದ ಮೊಬೈಲ್ ಬ್ಯಾಂಕಿಂಗ್ ಸೇವೆಗಳಾದ ಮೊಬೈಲ್ ಅಪ್ಲಿಕೇಶನ್, ಸದಸ್ಯತ್ವ ಸಂಖ್ಯೆಯಿಂದ ಸಹಕಾರಿಯವೆಬ್‌ಸೈಟ್‌ಗೆ ಲಾಗಿನ್ ಮತ್ತು ವಿಭಿನ್ನ ಭಾಷೆಗಳಲ್ಲಿ ವಹಿವಾಟು ನಡೆಸಲು ಅವಕಾಶ, ಖಾತೆ ಸಂಬಂಧಿತ ವಿವಿಧ ಆಯ್ಕೆಗಳ ಲಭ್ಯತೆ ಮತ್ತು ಎಲ್ಲಿಂದಲಾದರೂ ಖಾತೆ ವಿವರ ತಿಳಿಯಬಹುದಾದ ಸೌಲಭ್ಯ ಕಲ್ಪಿಸಲಾಗಿದೆ.ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮೂಲಕ ಸಹಕಾರಿಯ ಮೊಬೈಲ್ ಅಪ್ಲಿಕೇಶನ್ ಪ್ಲೇ ಸ್ಟೋರ್‌ನಲ್ಲಿ ಡೌನ್ ಲೋಡ್ ಮಾಡಿಕೊಳ್ಳುವ ಸೌಲಭ್ಯ ಗಳನ್ನು ಸದಸ್ಯರಿಗೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ಎಸ್.ಎನ್. ಸಂಪತ್‌ಕುಮಾರ್, ನಿರ್ದೇಶಕ ಎಸ್.ಜಿ. ನರಸಿಂಹಮೂರ್ತಿ(ಎಸ್‌ಟಿಡಿ ಮೂರ್ತಿ), ಎಂ. ಮೋಹನ್ ಕುಮಾರ್, ಎಚ್.ರಾಜಣ್ಣ, ಅರುಣ ಪ್ರಕಾಶ್, ಬಿ.ಎಂ.ಗೀತಾ, ಟಿ.ಎನ್. ಶ್ರೀನಿವಾಸ್,ಕೆ.ಜಿ.ರಾಮಕೃಷ್ಣಯ್ಯ, ಜಿ. ನರಸಿಂಹಮೂರ್ತಿ, ಸಿ.ಶ್ರೀನಿವಾಸ್, ಕೆ.ವಿ. ಸತೀಶ್, ಸಿ.ಆರ್.ಜಯಪ್ಪರೆಡ್ಡಿ, ಸಿಇಒ ನಾಗೇಶ್.ಟಿ.ಆರ್ ಉಪಸ್ಥಿತರಿದ್ದರು.
