ಉದಯವಾಹಿನಿ, ದೇವನಹಳ್ಳಿ: ತಾಲೂಕಿನ ಹಲವಾರು ಗ್ರಾಮಗಳಿಗೆ ಸಂಪರ್ಕ ರಸೆಗಳಿಲ್ಲದೇ ಜನ ಇಂದಿಗೂ ಸ್ಮಶಾನ ಪರದಾಡುತ್ತಿದ್ದಾರೆ. ಹಲವು ಕಡೆ ರಸ್ತೆಗಳನ್ಣೆ ಒತ್ತುವರಿ ಮಾಡಲಾಗಿದೆ ಮತ್ತಲವು ಕಡೆ ಜಮೀನುಗಳಿಗೆ ಗೊಬ್ಬರಗೊಡು ಸಾಗಿಸುವ ಬಂಡಿಜಾಡು ಕಾಲುದಾರಿ, ಸ್ಮಶಾನ ರಸ್ತೆಗಳನ್ನು ಒತ್ತುವರಿ ಮಾಡಿದ್ದಾರೆ ಇದನ್ನು ಕೂಡಲೇ ತೆರವು ಗೊಳಿಸಲು ಕ್ರಮ ವಹಿಸಬೇಕೆಂದು ಪ್ರೊ. ನಂಜುAಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಡಾ. ಕೆ.ವಿನೋದಕುಮರಗೌಡ ತಹಶೀಲ್ದಾರ್ ಎಚ್. ಬಾಲಕೃಷ್ಣರವರಿಗೆ ಮನವಿ ಸಲ್ಲಿಸಿದರು.ಈ ವೇಳೆ ತಮ್ಮ ಸಂಘಟನೆಯ ಪದಾಧಿಕಾರಿಗಳು ಹಾಗೂ ರಾಜ್ಯ ಕಾರ್ಯದರ್ಶಿ ಕಡತನಮಲೇ ನಂಜುAಡಪ್ಪ ಜೊತೆಗೂಡಿ ಇಲ್ಲಿನ ತಾಲೂಕು ಕಚೇರಿಯಲ್ಲಿ ಈ ಬಗ್ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಪ್ರಮುಖವಾಗಿ ತಾಲೂಕಿನ ಹೊಸಹುಡ್ಯ, ಸಿಂಗವಾರ ದೊಡ್ಡಸಾಗರಹಳ್ಳಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳು ಒತ್ತುವರಿಯಾಗಿರುವುದರಿಂದ ಸ್ವತಂತ್ರ ಬಂದು ೭೫ ವರ್ಷಗಳು ಕಳೆದರೂ ಈ ಗ್ರಾಮಗಳಿಗೆ ಇಂದಿಗೂ ಸರ್ಕಾರಿ ಅಥವಾ ಖಾಸಗಿ ಬಸ್ ಸೌಲಭ್ಯವಿಲ್ಲ ಜನ ರಾತ್ರಿ ಹಗಲು ನಾಲ್ಕೆಂದು ಕಿ.ಮಿ. ನಡೆದು ಹೆದ್ದಾರಿ ೭ರ ವೆಂಕಟಗಿರಿಕೊಟೆ ಅಥವಾ ಅತ್ತ ಕಡೆ ನಂದಿ ಬೆಟ್ಟ ರಸ್ತೆಯ ಕಾರಹಳ್ಳಿ ಕುಡೀತಿ ಕ್ರಾಸ್ ತಲುಬೇಕಿದೆ. ಇದುವರೆವಿಗೂ ಈ ಕ್ಷೇತ್ರದಿಂದ ಗೆದ ಯಾವೊಬ್ಬ ಶಾಸಕರೂ ಇದರ ಬಗ್ಗೆ ತಲೆ ಕೆಡೆಸಿಕೊಂಡಿಲ್ಲ ಈಗ ಮೊದಲ ಬಾರಿ ಕ್ಷೇತ್ರದಲ್ಲಿ ಸಚಿವರಾಗಿದ್ದೂ ಅವರೂ ಸಹ ಇಂತಹ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಮಿದೆ. ರೀತಿ ಹೊಗಳಿಗೆ ಹೋಗುವ ಬಂಡಿಜಾಡು ರಸ್ತೆಗಳು ಕಾಲುದಾರಿಗಳು ನಕಾಶೆ ರಸ್ತೆಗಳನ್ನು ಒತ್ತುವರಿ ಮಾಡಲಾಗಿದೆ ಅದೇ ರೀತಿ ವೆಂಕಟಗಿರಿಕೋಟೆ ಕೆರೆ ಕೋಡಿಯನ್ನು ಖಾಸಗಿಯವರು ಮುಚ್ಚಿ ಕಿರಿದಾಗಿ ಮಾಡಿರುವುದರಿಂದ ಕೋಡಿ ಬಿದ್ದ ನೀರು ಜಮೀನುಗಳಿಗೆ ಹರಿದು ಬೆಳೆಗಳು ನಷ್ಟ ಉಂಟಾಗುತ್ತಿದೆ. ಕೊಮ್ಮಸಂದ್ರದ ರೈತರ ಜಮೀನು ಬಂಡಿ ಜಾಡು ಕಾಲುದಾರಿ ಮುಚ್ಚಿ ಒತ್ತುವರಿ ಮಾಡಲಾಗಿದೆ.
ಈ ಪರಿಸ್ಥಿತಿ ತಾಲುಕಿನ ಬಹುತೇಕ ಗ್ರಾಮಗಳ್ಲಿ ಇದೆ ಈ ಬಗ್ಗೆ ನಾವು ಈಗಾಗಲೇ ಜಿಲ್ಲಾದಿಕಾರಿಗೂ ಮನವಿ ಸಲ್ಲಿಸಿದ್ದೆವೆ ತಹಶೀಲ್ದಾರ್ ಕಚೇರಿಗೂ ಮನವಿ ಸಲ್ಲಿಸುತ್ತಿದ್ದೆವೆ ಈ ಬಗ್ಗೆ ಅಧಿಕಾರಿಗಳು ಗ್ರಾಮಗಳಿಗೆ ಬೇಟಿ ನೀಡಿ ವಾಸ್ತಾವಾಂಶದ ಸ್ಥಳ ¥ರಿಶೀಲನೆ ನಡೆಸಿ ರಸ್ತೆ ಒತ್ತುವರಿ ತೆರೆವುಗೊಳಿಸಿ ರಸ್ತೆ ಅಗಲೀಕರಣ ಮಾಡದೇ ಹೋದರೆ ನಾವು ಮುಂದಿನ ದಿನಗಳಲ್ಲಿ ಈ ಬಗ್ಗೆ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಬಾಲಕೃಷ್ಣ ಮಾತನಾಡಿ ನಾನಬು ಗ್ರಾಮಗಳಿಗೆ ಬೇಟಿ ನೀಡಿ ಭೂಮಾಪನ ಅಧಿಕಾರಿಗಳ ಜೊತೆಗೂಡಿ ರಸ್ತೆ ತೆರವು ಮಾಡಿಸಿಕೊಡುತ್ತೆನೆ ನಿಮ್ಮ ಸಹಕಾರವಿದ್ದರೆ ನಾವು ಅಧಿಕಾರಿಗಳು ಕಾನೂನು ರೀತಿ ಕ್ರಮ ಕೈಗೊಂಡು ನಿಮಗೆ ಅನುಕೂಲ ಮಾಡಿಕೊಡುತ್ತೆವೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಕಡತನಮಲೇ ನಂಜುAಡಪ್ಪ, ಸಂಘಟನಾ ಕಾರ್ಯದರ್ಶಿ ತಾಲೂಕು ಅಧ್ಯಕ್ಷ ಜಯಶಂಕರ್, ನಾರಾಯಣಸ್ವಾಮಿ, ಹೊಸಹುಡ್ಯ ಮೂರ್ತಿ ಮುಂತಾದವರಿದ್ದರು.
