ಉದಯವಾಹಿನಿ, ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಅಂಬಾರಿಯಲ್ಲಿ ಪಾಲ್ಗೊಳ್ಳುವ ಗಜ ಪಡೆಗೆ ತಾಲೀಮು ಬಿರುಸುನಿಂದ ನಡೆಯುತ್ತಿದ್ದು, ಆನೆಗಳ ಪಾದಗಳನ್ನು ಇಂದು ಅರಣ್ಯ ಇಲಾಖೆ ಹಾಗೂ ಮೆಟಲ್ಡಿಟೆಕ್ಟಿವ್ ಪರಿಶೀಲನೆ ನಡೆಸಲಾಯಿತು.ವೀರನಹೊಸಳ್ಳಿ ಆನೆ ಕ್ಯಾಂಪ್ನಿಂದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ನಗರಕ್ಕೆ ಆಗಮಿಸಿದ್ದು, ಈಗಾಗಲೇ ಪ್ರತಿನಿತ್ಯ ತಾಲೀಮು ನಡೆಸಲಾಗುತ್ತಿದೆ.ಕಾಡಿನಲ್ಲಿ ಹಾಗೂ ನಗರದಲ್ಲಿ ಆನೆಗಳು ಸಂಚರಿಸುವಾಗ ಕಾಲುಗಳಿಗೆ ಕಬ್ಬಿಣದ ಮೊಳೆ ಹಾಗೂ ಮುಳ್ಳುಗಳು ನಾಟಿ ಪಾದಗಳ ಒಳಗೆ ಸಿಲುಕಿಕೊಂಡಿದ್ದರೆ ತಾಲೀಮಿಗೆ ತೊಂದರೆಯಾಗುತ್ತದೆ.
ಜೊತೆಗೆ ಅಂಬಾರಿ ಸಮಯದಲ್ಲಿ ಹೆಜ್ಜೆ ಹಾಕಲು ಅಳುಕುತ್ತವೆ ಎಂಬ ಉದ್ದೇಶದಿಂದ ಇಂದು ಎಲ್ಲಾ ಆನೆಗಳ ಕಾಲುಗಳ ಪಾದಗಳನ್ನು ಮೆಟಲ್ಡಿಟೆಕ್ಟಿವ್ ಉಪಕರಣದ ಮೂಲಕ ಪರಿಶೀಲನೆ ನಡೆಸಲಾಯಿತು.ಪ್ರತಿದಿನ ತಾಲೀಮು ಮುಗಿಸಿದ ನಂತರ ಆನೆಗಳ ಪಾದಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಇಲ್ಲಿಯವರೆಗೆ ಯಾವುದೇ ರೀತಿಯ ಕಬ್ಬಿಣದ ಮೊಳೆ ಅಥವಾ ಚೂರುಗಳು ಕಂಡು ಬಂದಿಲ್ಲ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!