ಉದಯವಾಹಿನಿ, ಬೆಂಗಳೂರು: ದೇಶದಲ್ಲಿ ಉತ್ತಮ ಸಾರಿಗೆ ಸೇವೆಗೆ ಹೆಸರಾಗಿರುವ ಕೆಎಸ್‌ಆರ್‌ಟಿಸಿಗೆ ರಾಷ್ಟ್ರ ಮಟ್ಟದ ಎಂಟು ವೀಡಿಯಾ, ಐದು ಎಮ್ಕ್ಯೂಬ್, ಎರಡು ಸ್ಕೋಚ್ ಆರ್ಡರ್ ಆಫ್ ಮೆರಿಟ್ ಹಾಗೂ ಒಂದು ಸ್ಕೋಚ್ ಪ್ರಶಸ್ತಿಗಳು ಲಭಿಸಿವೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನ ತಂತ್ರಜ್ಞಾನ ಉತ್ತಮ ಸೇವೆ ನೀಡುತ್ತಾ ದೇಶದೆಲ್ಲೆಡೆ ಮನೆ ಮಾತಾಗಿದ್ದು, ಒಂದಿಲ್ಲೊಂದು ಸಾಧನೆಯ ಮೂಲಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಲೇ ಬರುತ್ತಿದೆ. ಅದರಂತೆ ಇದೀಗ ರಾಷ್ಟ್ರಮಟ್ಟದ 16 ಪ್ರಶಸ್ತಿಗಳು ಲಭಿಸಿರುವುದು ಹೆಮೆಯ ವಿಷಯ.
ಪಲ್ಲಕ್ಕಿ ಬ್ರಾಂಡಿಂಗ್‌ಗಾಗಿ ಪ್ರಾಡಕ್ಟ್ ಪ್ಲೇಸೆಂಟ್‌ನಲ್ಲಿ ಅತ್ಯುತ್ತಮ ವೀಡಿಯೋ ಕಂಟೆಂಟ್ ಪ್ರಶಸ್ತಿ.
