ಉದಯವಾಹಿನಿ, ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಬಹುತೇಕ ಪೂರ್ಣವಾಗಿದ್ದು, ಇಂದು ಅಥವಾ ನಾಳೆಯೊಳಗೆ ಚಾರ್ಜ್ಶೀಟ್ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದೆಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಸಾಕ್ಷ್ಯಾಧಾರಗಳನ್ನು ಆಧರಿಸಿ ದೋಷಾರೋಪಣಾ ಪಟ್ಟಿ ಸಿದ್ಧಪಡಿಸಿದ್ದು, ಅದನ್ನು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ಎಸ್ಪಿ) ಪರಿಶೀಲನೆ ನಡೆಸಿದ್ದು, ಕೆಲವೊಂದು ವಿಷಯಗಳ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ಅದಕ್ಕೂ ನಾವು ಉತ್ತರ ಸಿದ್ಧಪಡಿಸಿದ್ದೇವೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಸಾಕ್ಷ್ಯಾಧಾರಗಳುಚಸಿಕ್ಕಿದ್ದು, ಅದರ ಪೂರ್ಣ ವಿವರ ಒಳಗೊಂಡಿರುವ ಚಾರ್ಜ್ಶೀಟ್ಅನ್ನು ಇನ್ನೆರಡು ದಿನಗಳೊಳಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಆಯುಕ್ತರು ತಿಳಿಸಿದರು. ಬೆಂಗಳೂರಿನ ವಿಧಿ-ವಿಜ್ಞಾನ ಪ್ರಯೋಗಾಲಯದಿಂದ ಎಲ್ಲಾ ವರದಿಗಳು ಬಂದಿದ್ದು, ಜೊತೆಗೆ ಅದಕ್ಕೆ ಸೇರಿದ ಪೂರಕ ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸಲಾಗಿದೆ.ಹೈದರಾಬಾದ್ನ ಎಫ್ಎಸ್ಎಲ್ನಿಂದ ಕೆಲ ವರದಿಗಳು ಬರುವುದು ಬಾಕಿ ಇದೆ. ಆದರೂ ಸಹ ಅದರ ತನಿಖೆ ಬಾಕಿ ಇಟ್ಟು ನಾವು ಮುಂದುವರೆಯುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು.ಆರೋಪಿಗಳಿಗೆ ಯಾವ ಸೆಕ್ಷನ್ನಡಿ ಶಿಕ್ಷೆಯಾಗಬಹುದು ಎಂಬುದನ್ನು ಸಾಕ್ಷಿ ಆಧಾರಗಳ ಮೇಲೆ ನಿರ್ಧಾರವಾಗುತ್ತದೆ ಎಂದು ಆಯುಕ್ತರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Leave a Reply

Your email address will not be published. Required fields are marked *

error: Content is protected !!