ಉದಯವಾಹಿನಿ, ಬೆಂಗಳೂರು: ಅಂಗಡಿಯವರ ಗಮನ ಬೇರೆಡೆ ಸೆಳೆದು ಲಕ್ಷಾಂತರ ಬೆಲೆಯ ಸೀರೆಗಳನ್ನು ಕಳ್ಳತನ ಮಾಡುತ್ತಿದ್ದ ಆಂಧ್ರ ಪ್ರದೇಶದ ನಾಲ್ವರು ಕಳ್ಳಿಯರ ಗ್ಯಾಂಗ್ನ್ನು ಬಂಧಿಸಿರುವ ಜೆ.ಪಿ.ನಗರ ಠಾಣೆ ಪೊಲೀಸರು 17.5 ಲಕ್ಷ ಬೆಲೆ ಬಾಳುವ 38 ರೇಷೆ ಸೀರೆಗಳ ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಕೃಷ್ಣಗಿರಿಯ ಜಿಲ್ಲೆಯ ಕೋಡಂಪಲ್ಲಿ ನಿವಾಸಿಗಳಾದ ಜಾನಕಿ, ಪೊನ್ನೂರು ಮಲ್ಲಿ, ಮೇದ ರಜಿನಿ ಮತ್ತು ವೆಂಕಟೇಶ್ವರಮ ಬಂಧಿತ ಆರೋಪಿತೆಯರು.ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸಿಲ್ಕ್ ಹೌಸ್ವೊಂದಕ್ಕೆ ಗ್ರಾಹಕರಂತೆ ಸೀರೆಗಳನ್ನು ಖರೀದಿಸುವ ನೆಪದಲ್ಲಿ ಆರು ಮಂದಿಯ ಮಹಿಳಾ ಗ್ಯಾಂಗ್ ಅಂಗಡಿಗೆ ಪ್ರವೇಶಿಸಿದೆ.
ಅಂಗಡಿಯಲ್ಲಿ ಸೇಲ್‌್ಸ ಕೆಲಸ ನಿರ್ವಹಿಸುತ್ತಿದ್ದವರು ಬಂದ ಗ್ರಾಹಕರಿಗೆ ವಿವಿಧ ಶ್ರೇಣಿಯ, ವಿವಿಧ ಬಗೆಯ ಹಲವಾರು ರೇಷ್ಮೆಸೀರೆಗಳನ್ನು ತೋರಿಸುತ್ತಿದ್ದರು.ಆ ವೇಳೆ ಈ ಮಹಿಳಾ ಗ್ಯಾಂಗ್ ರೇಷ್ಮೆ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುವ ನೆಪದಲ್ಲಿ ಅಂಗಡಿಯ ಮಾಲೀಕರು ಹಾಗೂ ಇತರೆಕೆಲಸಗಾರರ ಗಮನವನ್ನು ಬೇರೆಡೆ ಸೆಳೆದಿದ್ದಾರೆ.
ಆರು ಮಹಿಳೆಯರ ಪೈಕಿ ಇಬ್ಬರು ಮಹಿಳೆಯರು ಅವರು ಧರಿಸಿದ್ದಸೀರೆಯ ಪೆಟ್ಟಿಕೋಟ್ನಲ್ಲಿ ಅಳವಡಿಸಿದ್ದ ಜಿಪ್ ಪಾಕೆಟ್ ಒಳಗೆ ಲಕ್ಷಾಂತರ ಬೆಲೆಬಾಳುವ 8 ರೇಷ್ಮೆ ಸೀರೆಗಳನ್ನು ಅಡಗಿಸಿಟ್ಟುಕೊಂಡು ಅಂಗಡಿಯಿಂದ ಪರಾರಿಯಾಗಿದ್ದಾರೆ. ಉಳಿದ ನಾಲ್ವರು ಮಹಿಳೆಯರು ಅಂಗಡಿಯಲ್ಲೇ ಉಳಿದು ಇತರೆ ರೇಷ್ಮೆ ಸೀರೆಗಳನ್ನು ಆಯ್ಕೆ ಮಾಡುವಂತೆ ನಟಿಸುತ್ತಾ, ಮತ್ತೊಮೆ ಅಂಗಡಿಯಲ್ಲಿದ್ದ ಮಾಲೀಕರು ಮತ್ತು ಕೆಲಸಗಾರರ ಗಮನ ಬೇರೆಡೆ ಸೆಳೆದು, ಈ ನಾಲ್ವರು ಮಹಿಳೆಯರು 10 ರೇಷ್ಮೆ ಸೀರೆಗಳನ್ನು ಅವರು ಧರಿಸಿದ್ದ ಸೀರೆಯೊಳಗೆ ಅಡಗಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.
