ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಾರ ಜಾಗದಲ್ಲಿ ಮನೆಯನ್ನು ಕಟ್ಟಿದ್ದರು ಎಂಬುದನ್ನು ಬಹಿರಂಗಪಡಿಸಲಿ ಎಂದು ಕೇಂದ್ರದ ಭಾರಿ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಿಂದ 15 ನಿವೇಶನ ಪಡೆದಿರುವುದು ಒಂದು ಭಾಗವಾದರೆ, ದಲಿತರ, ವಿಕಲಚೇತನರಿಗೆ ಹಂಚಿಕೆಯಾಗಿದ್ದ ನಿವೇಶನದಲ್ಲಿ ಅಕ್ರಮವಾಗಿ ಮನೆ ಕಟ್ಟಿದ್ದರು ಎಂದು ಆರೋಪಿಸಿದರು.ಮಾತೆತ್ತಿದರೆ ತಮದು ತೆರೆದ ಪುಸ್ತಕ ಎನ್ನುವ ಅವರು, ಮನೆ ಕಟ್ಟಿದ್ದ ಜಾಗ ಯಾರದೆಂಬುದನ್ನು ಹೇಳಲಿ. ಸಾಕಮ ಎಂಬುವರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಮನೆ ಕಟ್ಟಿದ್ದರು. ಆ ಮನೆ ಮಾರಾಟವಾಗಿದ್ದರೂ ಇದು ಯಾರ ಸ್ವಾಧೀನದಲ್ಲಿದೆ ಎಂಬುದು ಗೊತ್ತಿದೆ, ಈ ಸಂಬಂಧ ದಾಖಲೆಗಳು ತಮ ಬಳಿ ಇವೆ ಎಂದು ಹೇಳಿದರು.
ಆಕ್ರೋಶ : ರೈತರ ಹೆಸರಿನಲ್ಲಿ ಗ್ರಾಹಕರಿಗೆ ಹೊರೆಯಾಗುವಂತೆ ಹಾಲಿನ ದರ ಹೆಚ್ಚಳ ಮಾಡಲು ರಾಜ್ಯಸರ್ಕಾರ ಮುಂದಾಗಿದೆ. ಆದರೆ ವಿವಿಧ ಜಿಲ್ಲೆಗಳಲ್ಲಿ ಪ್ರತಿ ಲೀಟರ್‌ಗೆ ಒಂದೂವರೆಯಿಂದ ಎರಡು ರೂಪಾಯಿವರೆಗೂ ಕಡಿಮೆ ಮಾಡಲಾಗಿದೆ. ರೈತರ ಹಿತ ಕಾಪಾಡುವ ಸರ್ಕಾರ ಏಕೆ ರೈತರ ಹಾಲಿನ ಖರೀದಿ ದರವನ್ನು ಕಡಿಮೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಾಲಿನ ದರ ಏರಿಕೆಯಿಂದ ರೈತರಿಗೂ ಅನುಕೂಲವಿಲ್ಲ. ಗ್ರಾಹಕರಿಗೂ ಲಾಭವಿಲ್ಲ. ಆದರೆ ಸರ್ಕಾರ ಮಾತ್ರ ಹಾಲಿನ ದರ ಏರಿಕೆ ಮಾಡುತ್ತಿದೆ ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿ ಲೀಟರ್ ಹಾಲಿಗೆ ಎರಡು ರೂಪಾಯಿ ಪ್ರೋತ್ಸಾಹ ಧನ ನೀಡುವುದನ್ನು ಪ್ರಾರಂಭಿಸಿದರು. ಆನಂತರ 5 ರೂಪಾಯಿಗೆ ಏರಿಕೆಯಾಗಿತ್ತು. ತಾವು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅದನ್ನು ಪ್ರತೀ ಲೀಟರ್‌ಹಾಲಿಗೆ 6 ರೂ. ಪ್ರೋತ್ಸಾಹಧನ ನೀಡಲು ತೀರ್ಮಾನಿಸಲಾಗಿತ್ತು. ಅಷ್ಟರಲ್ಲಿ ಮೈತ್ರಿ ಸರ್ಕಾರವನ್ನೇ ಪತನಗೊಳಿಸಿದರು ಎಂದರು.
