ಉದಯವಾಹಿನಿ, ಬೆಂಗಳೂರು : ನಾಗಮಂಗಲದಲ್ಲಿ ಶ್ರೀ ಗಣೇಶಮೂರ್ತಿ ವಿಸರ್ಜನೆಯ ಸಮಯದಲ್ಲಿ ಧಾರ್ಮಿಕ ಗಲಭೆಗೆ ಹಿಂದೂಗಳೇ ಕಾರಣ ಎಂದು ಸಚಿವ ಜಮೀರ್ ಅಹಮದ ಆರೋಪಿಸಿದ್ದಾರೆ. ಅವರು, “ಮೆರವಣಿಗೆಯು ದರ್ಗಾದ ಮುಂದಿನಿಂದ ಹಾದುಹೋಗುವ ಸಮಯದಲ್ಲಿ ನಮಾಜ್‌ನ ಸಮಯವಾದ್ದರಿಂದ 10 ನಿಮಿಷಗಳ ಕಾಲ ಅವರಿಗೆ(ಹಿಂದೂಗಳಿಗೆ) ನಿಲ್ಲಿಸಲು ಕೇಳಲಾಯಿತು; ಆದರೆ ಇದನ್ನು ಒಪ್ಪದ ಕಾರಣ ಗಲಾಟೆ ನಡೆದಿದೆ.
ರಾಜಕೀಯ ನಾಯಕರ ಹೇಳಿಕೆಗಳಿಂದಾಗಿ ಈ ವಿಷಯ ಕಾವೇರಿದೆ. ‘ಗಲಭೆ ಆಗಬೇಕು ಎಂದು ನಾನು ಹೇಳಿರಲಿಲ್ಲ. ಇಂತಹ ಗಲಭೆಗಳು ನಡೆಯಬಾರದು ಎಂದು ನಾವೆಲ್ಲರೂ ಪ್ರಯತ್ನಿಸಬೇಕು. ‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಂತಹ ಗಲಭೆಗಳು ನಡೆಯುತ್ತವೆ’ ಎಂದು ಹೇಳುವುದು ತಪ್ಪು. ಭಾಜಪ ಇದ್ದಾಗ ಗಲಭೆಗಳಾಗಲಿಲ್ಲವೇ ?” ಎಂದು ಹೇಳಿದರು.
