ಉದಯವಾಹಿನಿ, ಚಾಮರಾಜನಗರ: ಚಿರತೆಯನ್ನು ಅಟ್ಟಾಡಿಸಿ, ಬೆದರಿಸಿ ಚಿರತೆ ಹೊತ್ತೊಯ್ದಿದ್ದ ಕುರಿಯನ್ನು ಬಚಾಬ್ ಮಾಡಿತಂದ ಘಟನೆ ಕೊಳ್ಳೇಗಾಲ ತಾಲೂಕಿನ ಕೆಂಪನಪಾಳ್ಯ ಗ್ರಾಮದಲ್ಲಿ ನಡೆದಿದೆ. ಈ ರೋಚಕ ಘಟನೆ ನಡೆದಿದೆ. ಕೆಂಪನಪಾಳ್ಯ ಗ್ರಾಮದ ಮುದುಮಲೆಗುಡ್ಡದ ಸಮೀಪ ಚಿರತೆಯೊಂದು ಕುರಿಗಳ ಹಿಂಡಿನ ಮೇಲೆ ದಾಳಿ ಮಾಡಿ ಒಂದು ಕುರಿಯನ್ನು ಎತ್ತುಕೊಂಡು ಹೋಗುತ್ತಿತ್ತು. ಈ ವೇಳೆ, ಕುರಿಗಾಹಿ ಮಂಜು ಚಿತ್ರಪ್ಪ ಅದನ್ನು ಗಮನಿಸಿ ಬೆನ್ನಟ್ಟಿಕೊಂಡು ಹೋಗಿ, ಹೆದರಿಸಿದ ವೇಳೆ ಗಾಬರಿಗೊಂಡ ಚಿರತೆ ಯುಕುರಿಯನ್ನು ಬಿಟ್ಟು ನೀರಿನ ಪೈಪ್ ಒಳಗೆಸೇರಿಕೊಂಡಿದೆ. ಕುರಿಗಾಹಿ ಮಂಜುಚಿತ್ರಪ್ಪ ಬದುಕಿದೆಯಾ ಬಡಜೀವವೇ ಎಂದು ಕುರಿಯನ್ನುಕರೆತಂದಿದ್ದಾನೆ. ಈಗಾಗಲೇ ಮೂರು ಕುರಿಗಳನ್ನು ಚಿರತೆಎತ್ತೊಯ್ದಿವೆ. ಇದನ್ನು ನಾವು ಬಿಡಿಸಿಕೊಂಡು ಬಂದೆವು. ಮೂರು ಕುರಿಗಳು ಎತ್ತೊಯ್ದಿರುವ ಬಗ್ಗೆ ನಾವು ಯಾರಿಗೂ ಹೇಳಿರಲಿಲ್ಲ. ಹಾಗಾಗಿ ನಮಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ ಮಂಜುಚಿತ್ರಪ್ಪ. ಬಳಿಕ, ಅರಣ್ಯ ಇಲಾಖೆಗೆ ಮಾಹಿತಿ ತಿಳಿದು ಕಾರ್ಯಾಚರಣೆ ನಡೆಸಿ ಬೋನ್‍ಮೂಲಕ ಚಿರತೆಯನ್ನು ಸೆರೆಹಿಡಿದಿದ್ದಾರೆ.

Leave a Reply

Your email address will not be published. Required fields are marked *

error: Content is protected !!