ಉದಯವಾಹಿನಿ, ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಅರಸಿಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ನಾಲ್ಕು ಬಾರಿಯಿಂದಲೂ ಅತ್ಯಧಿಕ ಮತಗಳಿಂದ ಜಯಗಳಿಸುತ್ತಾ ಬಂದಿರುವ ಕೆಎಂ ಶಿವಲಿಂಗೇಗೌಡರು ಈ ಹಿಂದೆ ಮೂರು ಬಾರಿ ಜಾತ್ಯತೀತ ಜನತಾದಳ ಪಕ್ಷದಿಂದ ಸ್ಪರ್ಧಿಸಿದ್ದರು. ಕಾರಣಾಂತರದಿಂದ ಈ ಬಾರಿ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ನಿಂದ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು ಕೆಎಂ ಶಿವಲಿಂಗೇಗೌಡ ಜೆಡಿಎಸ್ ತೊರೆದಿದ್ದರಿಂದ ಶತಾಯಗತಾಯ ಶಿವಲಿಂಗೇಗೌಡರನ್ನು ಸೋಲಿಸಬೇಕೆಂದು ದಳಪತಿಗಳೇ ಖುದ್ದು ಹಲವಾರು ಭೇಟಿ ನೀಡಿದರು ಸಹ ಜಾತ್ಯತೀತ ಜನತಾದಳದ ಪಕ್ಷದ ವತಿಯಿಂದ ಸ್ಪರ್ಧಿಸಿದ್ದ ಎನ್ಆರ್ ಸಂತೋಷ್ ರವರ ವಿರುದ್ಧ 20000 ಮತಗಳ ಅಂತರದಿಂದ ಶಿವಲಿಂಗೇಗೌಡರು ಜಯಗಳಿಸಿ ತಮ್ಮ ಜನಪ್ರಿಯತೆ ಇನ್ನು ಪ್ರದರ್ಶಿಸಿದರು. ಇದನ್ನು ಅರಿತಿರುವ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮತ್ತು ವರಿಷ್ಠರು ಶಿವಲಿಂಗೇಗೌಡರಿಗೆ ಪ್ರಭಾವಿ ಸಚಿವ ಸ್ಥಾನ ನೀಡಿದ್ದೆ ಆದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವುದರಲ್ಲಿ ಎರಡು ಮಾತಿಲ್ಲ ಲೋಕಸಭಾ ಚುನಾವಣೆ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಗಳು ಹತ್ತಿರವಿರುವದರಿಂದ ಪಕ್ಷ ಸಂಘಟನೆ ಇಮ್ಮಡಿಯಾಗುತ್ತದೆ ಹೀಗಾಗಿ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಇತ್ತೀಚಿಗೆ ಚನ್ನರಾಯಪಟ್ಟಣದ ಪರಾಜಿತ ವಿಧಾನಸಭಾ ಅಭ್ಯರ್ಥಿ ಗೋಪಾಲಸ್ವಾಮಿ ಹೊಳೆನರಸೀಪುರದ ಪರಾಜಿತ ಅಭ್ಯರ್ಥಿ ಶ್ರೇಯಸ್ ಪಟೇಲ್ ಸೇರಿದಂತೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಹಲವಾರು ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರಾದ ಹಾಗೂ ಸಂಸದರಾದ ಡಿಕೆ ಸುರೇಶ್ ರವರ ಗಮನಕ್ಕೂ ತಂದಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡಿದೆ ಆದಲ್ಲಿ ಹಾಸನ ಜಿಲ್ಲೆ ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ ಕಾಂಗ್ರೆಸ್ ಪಕ್ಷದ ಮುಖಂಡರು ಅಲ್ಲದೆ ಪಕ್ಷದ ಸಂಘಟನೆಯು ಸಹ ಬಲಿಷ್ಠ ಗೊಳ್ಳಲಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ.ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್. ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಸಹಮತ ವ್ಯಕ್ತಪಡಿಸಿದ್ದಾರೆಂದು ಸಹ ಇಳಿದು ಬಂದಿದೆ ಕಾಂಗ್ರೆಸ್ ಪಕ್ಷದಲ್ಲಿ ಸಚಿವರ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿ ಬೆಳೆದಿದ್ದು ಪಕ್ಷದ ವರಿಷ್ಠ ರಿಗೆ ತಲೆ ನೋವಾಗಿ ಪರಿಣಮಿಸಿದೆ ಒಟ್ಟಿನಲ್ಲಿ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹಲವಾರು ಕಾಂಗ್ರೆಸ್ ಪಕ್ಷದ ನಾಯಕರು ಪತ್ರಿಕೆಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ

ಸಚಿವ ಸ್ಥಾನಕ್ಕಾಗಿ ಒತ್ತಾಯ : ಅರಸಿಕೆರೆ ತಾಲೂಕಿನ ಸ್ಥಳೀಯ ಮುಖಂಡರುಗಳಾದ ತೊಂಡಿಗನಹಳ್ಳಿ ಕೃಷ್ಣಮೂರ್ತಿ. ಅರಸೀಕೆರೆ ನಗರಸಭಾ ಮಾಜಿ ಅಧ್ಯಕ್ಷರಾದ ಸಮಿಉಲ್ಲಾ. ಗಂಡಸಿ ಹೋಬಳಿ ಪಕ್ಷದ ಮುಖಂಡರಾದ ಮತ್ತು ಪಡಿತರ ವಿತರಕರ ಸಂಘದ ತಾಲೂಕ ಅಧ್ಯಕ್ಷರಾದ ಚಿಕ್ಕ ಗಂಡಸಿ ನಾಗರಾಜು. ಬಾಣಾವರ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ ಎಂ ಜಯಣ್ಣ ಇವರು ಸಹ ಇಂದು ಪತ್ರಕರ್ತರೊಂದಿಗೆ ಮಾತನಾಡಿ ಶಾಸಕ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು

Leave a Reply

Your email address will not be published. Required fields are marked *

error: Content is protected !!