ಉದಯವಾಹಿನಿ,ಬೆಂಗಳೂರು : ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ [ಇಂಟರನ್ ಶಿಪ್] ತರಬೇತಿ ಪಡೆಯಲು ವಿವಿಧ ಕಂಪೆನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಇದಕ್ಕಾಗಿ ವಿಶ್ವೇಶ್ವರಯ್ಯ ಸಂಶೋಧನಾ ಮತ್ತು ನಾವೀನ್ಯತೆ ಸಂಸ್ಥೆಯನ್ನು ಹುಟ್ಟುಹಾಕಿ ೫ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಉಪಕುಲಪತಿಗಳು ಡಾ.ಎಸ್. ವಿದ್ಯಾಶಂಕರ್ ತಿಳಿಸಿದ್ದಾರೆ.
ನಗರದ ಸೋಮನಹಳ್ಳಿಯ ಆಚಾರ್ಯ ಪಾಠಶಾಲಾ ತಾಂತ್ರಿಕ ವಿದ್ಯಾಲಯದಲ್ಲಿ ವಿಶ್ವೇಶ್ವರಯ್ಯ ಸಂಶೋಧನಾ ಮತ್ತು ನಾವೀನ್ಯತೆ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಕೃತಕ ಬುದ್ಧಿಮತ್ತೆ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ಎಐಓಟಿ ಇಂಟರ್ನ್ ಶಿಪ್ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ವಿಟಿಯುನಲ್ಲಿ ಸಾಕಷ್ಟು ಕಂಪನಿಗಳ ಜೊತೆ ಎಂಓಯು ಮಾಡಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ತರಬೇತಿ ಪಡೆಯಲು ಅನುಕೂಲವಾಗುವಂತಹ ವಾತಾವರಣವನ್ನು ನಿರ್ಮಿಸಲಾಗಿದೆ ಎಂದರು.
ಎಪಿಎಸ್ ಶೈಕ್ಷಣಿಕ ಸಂಸ್ಥೆಯ ಅಧ್ಯಕ್ಷ ಡಾ ಸಿಎ ವಿಷ್ಣು ಭರತ್ ಆಲಂಪಲ್ಲಿ, ಉಪಾಧ್ಯಾಕ್ಷ ಡಾ ಎಸ್ ಸಿ ಶರ್ಮಾ, ಕಾರ್ಯದರ್ಶಿ ಪ್ರೊಫೆಸರ್ ಎ ಪ್ರಾಂಶುಪಾಲರಾದ ಡಾ. ಡಿಜಿ ಆನಂದ್, ಉಪ ಪ್ರಾಂಶುಪಾಲರಾದ ಡಾ. ಕೆ. ಎಸ್. ಆನಂದ್ ಮತ್ತಿತರರು ಉಪಸ್ಥಿತರಿದ್ದರು.
