ಉದಯವಾಹಿನಿ, ನರೇಗಲ್: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ವ್ಯಾಪ್ತಿಯಲ್ಲಿ ಭಾನುವಾರ ಒಂದು ಗಂಟೆಗೂ ಹೆಚ್ಚು ಹೊತ್ತು ಉತ್ತಮ ಮಳೆಯಾಗಿದೆ.
ಬೆಳಿಗ್ಗೆ ಬಿಸಿಲಿತ್ತು, ಮಧ್ಯಾಹ್ನ 3 ಗಂಟೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು. ನಂತರ ಸಂಜೆ 4.30ಕ್ಕೆ ಗುಡುಗು, ಮಿಂಚು ಸಹಿತ ಆರಂಭವಾದ ಮಳೆ ಒಂದು ತಾಸು ಜೋರಾಗಿ ಸುರಿಯಿತು.
ನಂತರ ಕೆಲಹೊತ್ತು ಜಿಟಿಜಿಟಿ ಮಳೆ ಸುರಿಯಿತು. ಹೊಲ ಹರಗಿ ಹಿಂಗಾರು ಕೃಷಿಗಾಗಿ ಕಾಯ್ದು ಕುಳಿತಿದ್ದ ರೈತರು ಖುಷಿಪಟ್ಟರು. ಈರುಳ್ಳಿ ಕಿತ್ತು ಗುಡ್ಡೆ ಹಾಕಿದ್ದು ಮಳೆ ಬಂದಾಗ ರಕ್ಷಣೆ ಮಾಡಿಕೊಳ್ಳಲು ಪರದಾಡಿದರು. ನರೇಗಲ್ ಪಟ್ಟಣದಲ್ಲಿ ಭಾನುವಾರ ಸುರಿದ ಮಳೆಯಲ್ಲಿ 3ನೇ ವಾರ್ಡಿನ ಆಶ್ರಯ ಕಾಲೋನಿಯಲ್ಲಿ ರೈತ ಶರಣಪ್ಪ ಕೊಂಡಿ ಹಾಗೂ ಸಹಚರರು ಈರುಳ್ಳಿ ರಾಶಿಯನ್ನು ರಕ್ಷಿಸಲು ಪರದಾಡಿದರು
