ಉದಯವಾಹಿನಿ, ತುಮಕೂರು: ಕಳೆದ ೩೩ವರ್ಷಗಳಿಂದ ನಗರದಲ್ಲಿ ದಸರಾ ಉತ್ಸವ ನಡೆಸಿಕೊಂಡು ಬರುತ್ತಿದ್ದ ದಸರಾ ಸಮಿತಿಯನ್ನು ಜಿಲ್ಲಾಡಳಿತ ನಡೆಸುವ ಸರಕಾರಿ ದಸರಾ ಉತ್ಸವ ಸಮಿತಿ ಕಡೆಗಣಿಸಿದ್ದರ ಹಿನ್ನೆಲೆಯಲ್ಲಿ ನಗರದ ಶ್ರೀರಾಮಮಂದಿರದ ಆವರಣದಲ್ಲಿ ೧೦ ದಿನಗಳ ಕಾಲ ದಸರಾ ಉತ್ಸವದ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಧಿ ವಿಧಾನಗಳು ನಡೆಯಲಿವೆ ಎಂದು ದಸರಾ ಉತ್ಸವ ಸಮಿತಿಯ ಖಜಾಂಚಿ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ ೩೩ ವರ್ಷಗಳಿಂದ ದಸರಾ ಉತ್ಸವ ಸಮಿತಿ ಪ್ರತಿವರ್ಷ ಒಂದೊAದು ಸಮುದಾಯ ಸ್ವಾಮೀಜಿಗಳ ನೇತೃತ್ವದಲ್ಲಿ ಶೋಭಾ ಯಾತ್ರೆ ಮತ್ತು ಸಾಂಸ್ಕೃತಿಕ ಉತ್ಸವಗಳನ್ನು ನಡೆಸಿಕೊಂಡು ಬರಲಾಗುತಿತ್ತು. ಆದರೆ ಈ ಬಾರಿ ಜಿಲ್ಲಾಡಳಿತವೇ ದಸರಾ ಉತ್ಸವವನ್ನು ಸರಕಾರಿ ಉತ್ಸವವಾಗಿ ಆಚರಿಸಲು ಮುಂದಾದಾಗ ನಾವುಗಳು ಸಹ ಸ್ವಾಗತಿಸಿ, ಅವರೊಂದಿಗೆ ಸಹಕರಿಸಲು ಮುಂದಾಗಿದ್ದೇವು.ಆದರೆ ಜಿಲ್ಲಾಡಳಿತ ನಮ್ಮನ್ನು ಕಡೆಗಣಿಸಿ, ಸರಕಾರದ ಅನುದಾನದಲ್ಲಿ ಒಂದು ಪಕ್ಷದ ಕಾರ್ಯಕ್ರಮವಾಗಿ ಕಾರ್ಯಕ್ರಮ ರೂಪಿಸಿರುವ ಹಿನ್ನೆಲೆಯಲ್ಲಿ,ಎಂದಿನAತೆ ದಸರಾ ಸಮಿತಿ ಶೋಭಾ ಯಾತ್ರೆಯನ್ನು ಕೈಬಿಟ್ಟು, ಬನ್ನಿಪೂಜೆ, ಸಾಮೂಹಿಕ ಶಮಿ ಪೂಜೆ ಸೇರಿದಂತೆ ಎಲ್ಲಾ ವಿಧಿ, ವಿಧಾನಗಳನ್ನು ಶ್ರೀರಾಮಮಂದಿರದ ಆವರಣದಲ್ಲಿ ಕೈಗೊಳ್ಳಲಿದ್ದೇವೆ ಎಂದರು.
ಜಿಲ್ಲಾಡಳಿತ ನಡೆಸುವ ದಸರಾ ಉತ್ಸವ ಸಮಿತಿಯಲ್ಲಿ ಶೇ೯೦ರಷ್ಟು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ಸದಸ್ಯರಾಗಿದ್ದಾರೆ. ಅಲ್ಲದೆ ಜನಸಾಮಾನ್ಯರಲ್ಲಿ ಸದಸ್ಯರಾಗಿ ಒಂದೇ ಪಕ್ಷದ ವ್ಯಕ್ತಿಗಳನ್ನು ಸದಸ್ಯರಾಗಿ ನೇಮಕ ಮಾಡಿದ್ದಾರೆ.ಅಲ್ಲದೆ ಸಾಮೂಹಿಕ ಶಮಿ ಪೂಜೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.ಶಮಿ ಪೂಜೆ ಎಂಬುದು ಹಿಂದುಗಳಿಗೆ ಸೇರಿದ್ದು.ಕಳೆದ ೩೩ ವರ್ಷಗಳಿಂದ ಜಿಲ್ಲಾಡಳಿತಕ್ಕೆ ಅನುಧಾನಕ್ಕಾಗಿ ಮನವಿ ಮಾಡುತ್ತಲೇ ಬಂದಿದ್ದೇವೆ.ಆದರೆ ಒಂದು ನೈಯಾ ಪೈಸೆ ನೀಡಿಲ್ಲ.ಆದರೆ ಈಗ ಎರಡುಕೋಟಿ ರೂ ಅನುದಾನ ನೀಡಲು ಮುಂದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
