ಉದಯವಾಹಿನಿ, ಹೈದರಾಬಾದ್: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್ ಮೇಲೆ ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ವಾಗ್ದಾಳಿ ನಡೆಸಿದ್ದಾರೆ.
ತಿರುಪತಿ ಲಡ್ಡುಗೆ ಜಗನ್ ರೆಡ್ಡಿ ಸಿಎಂ ಆಗಿದ್ದಾಗ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗುತ್ತಿತ್ತು ಎಂಬ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿದೆ.
ಇದರ ಬೆನ್ನಲ್ಲೇ ಆಂಧ್ರ ಡಿಸಿಎಂ ಮತ್ತು ನಟ ಪವನ್ ಕಲ್ಯಾಣ್ ದೇಶದಲ್ಲಿ ಸನಾತನ ಧರ್ಮ ಟ್ರಸ್ಟ್ ನಿರ್ಮಾಣ ಮಾಡುವ ಅಗತ್ಯವಿದೆ ಎಂದಿದ್ದರು.
ನಟ ಪ್ರಕಾಶ್ ರಾಜ್ ಕಾಮೆಂಟ್ ಮಾಡಿದ್ದರು. ಪವನ್ ನೀವು ನಿಮ್ಮ ರಾಜ್ಯದ ಬಗ್ಗೆ ಮಾತ್ರ ಗಮನ ಹರಿಸಿ. ಬೇಡದ ವಿಚಾರವೆಲ್ಲಾ ಯಾಕೆ ಎಂಬರ್ಥದಲ್ಲಿ ಮಾತನಾಡಿದ್ದರು. ದೇಶದಲ್ಲಿ ಈಗಾಗಲೇ ಸಾಕಷ್ಟು ಕೋಮುಗಲಭೆಗಳಾಗುತ್ತಿವೆ. ಇಂತಹ ಟ್ರಸ್ಟ್ ನಿರ್ಮಾಣ ಮಾಡಿದರೆ ಶಾಂತಿ ಕದಡಿದಂತಾಗುತ್ತದೆ ಎಂದಿದ್ದರು.
ಇದೀಗ ಪ್ರಕಾಶ್ ರಾಜ್ ವಿರುದ್ಧ ಪವನ್ ಕಲ್ಯಾಣ್ ವಾಗ್ದಾಳಿ ನಡೆಸಿದ್ದಾರೆ. ತಿರುಪತಿ ಲಡ್ಡು ಕಲಬೆರಕೆಯಾಗಿ ಅಪವಿತ್ರವಾಗಿರುವ ಕಾರಣಕ್ಕೆ ಪವನ್ ದೀಕ್ಷೆ ತೆಗೆದುಕೊಂಡಿದ್ದಾರೆ.
