ಉದಯವಾಹಿನಿ, ಜೇವರ್ಗಿ: ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಅಜಯ್ ಧರ್ಮಸಿಂಗ್ ಅವರಿಗೆ ಮಂತ್ರಿ ಸ್ಥಾನ ಸಿಗದೇ ಇದ್ದಕ್ಕಾಗಿ ಅಭಿಮಾನಿಗಳು& ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಕಾಂಗ್ರೆಸ್ ಪಕ್ಷ ಜಾತಿ ಆದರದ ಮೇಲೆ ಮಂತ್ರಿ ಗಿರಿ ಹಂಚಿಕೆ ಮಾಡುತ್ತಿದೆ. ಜಾತಿ ಪ್ರಾಬಲ್ಯ ಇರುವ ಶಾಸಕರಿಗೆ ಮಂತ್ರಿ ಗಿರಿ ನೀಡುತ್ತಿರುವುದು ಜೇವರ್ಗಿ ಮತದಾರರಲ್ಲಿ ಅಸಮಾಧಾನ ಉಂಟು ಮಾಡಿದೆ. ಸತತವಾಗಿ ಗೆಲುವು ಸಾಧಿಸಿದ ಅಜಯ್ ಸಿಂಗ್ ಮಂತ್ರಿ ಸ್ಥಾನ ದೊರೆಯುತ್ತದೆ ಎಂದು ಜೇವರ್ಗಿಯ ಪಕ್ಷದ ಕಾರ್ಯಕರ್ತರು ಬಹಳ ಆಸೆ ಇಟ್ಟುಕೊಂಡು ಕುಳಿತಿದ್ದರು. ಆದರೆ ಅಭಿಮಾನಿಗಳ ಆಸೆ ನುಚ್ಚುನೂರು ಮಾಡಿದ ಕಾಂಗ್ರೆಸ್ ಹೈಕಮಾಂಡ್.
ಜಾತಿ ಪ್ರಾಬಲ್ಯ ಇಲ್ಲದ ಕಾರಣ ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ಸಿಗ್ಲಿಲ್ಲ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಜೇವರ್ಗಿ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ. ಅಜಯ್ ಸಿಂಗ್ ಅವರಿಗೆ ಜಾತಿ ಬೆಂಬಲವಿದ್ದರೆ ಸಚಿವ ಸ್ಥಾನ ಸಿಗುತ್ತಿತ್ತು ಎಂದು ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ್ ಅವರ ಸುಪುತ್ರರಾಗಿದ್ದು ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ ಅಜಯ್ ಸಿಂಗ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ತಂದೆ ಇಲ್ಲದ ಮಗನಿಗೆ ಸಚಿವ ಸ್ಥಾನವೂ ಇಲ್ಲ ಒಂದು ವೇಳೆ ತಂದೆ ಇದ್ದರೆ ಸಚಿವ ಸ್ಥಾನ ಸಿಗುತ್ತಿತ್ತು ಎಂದು ಜೇವರ್ಗಿ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ. ಎನ್ ಧರ್ಮಸಿಂಗ್ ಅವರು ಕೂಡ ನಿಸ್ವಾರ್ಥ ರಾಜಕಾರಣ ಮಾಡಿದ್ದಾರೆ. ತಂದೆ ಹಾದಿಯಲ್ಲಿ ತಂದೆಗೆ ತಕ್ಕ ಮಗನಾಗಿ ಜೇವರ್ಗಿ ಜನರ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ಧೀಮಂತ ನಾಯಕನ ಸುಪುತ್ರವಾದ ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದು ಅಜಯ್ ಸಿಂಗ್ ಅಭಿಮಾನಿಗಳಲ್ಲಿ ಬಹಳ ಅಸಮಾಧಾನ ಉಂಟಾಗಿದೆ.

Leave a Reply

Your email address will not be published. Required fields are marked *

error: Content is protected !!