ಉದಯವಾಹಿನಿ, ನಾರಾಯಣಪುರ: ಬಸವಸಾಗರ ಜಲಾಶಯಕ್ಕೆ ಮಂಗಳವಾರ ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯದಿಂದ 15 ಸಾವಿರ ಕ್ಯುಸೆಕ್ ನೀರು ಬರುತ್ತಿದ್ದು ಬಸವಸಾಗರ ಜಲಾಶಯದ 2 ಕ್ರಸ್ಟ್‌ ಗೇಟ್ ತೆರೆದು 11 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ.
ಪಶ್ಚಿಮಘಟ್ಟ ಜಲಾನಯನ ಪ್ರದೇಶದಲ್ಲಿ ಮಳೆ ಆಗುತ್ತಿರುವುದರಿಂದ ಬಸವಸಾಗರದ ಒಳಹರಿವು ಗಮನಿಸಿ ಕೃಷ್ಣಾನದಿಗೆ ನೀರು ಬಿಡಲಾಗುತ್ತದೆ ಎಂದು ಕೆಬಿಜೆಎನ್‌ಎಲ್ ಮೂಲಗಳಿಂದ ತಿಳಿದುಬಂದಿದೆ. ಗರಿಷ್ಠ ಮಟ್ಟದಲ್ಲಿ ಇಂದು 492.23 ಮೀಟರಗೆ ನೀರಿದ್ದು, 33.22 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹಗೊಂಡಿದೆ. ಒಳಹರಿವು 15 ಸಾವಿರ ಕ್ಯುಸೆಕ್‌ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!