ಉದಯವಾಹಿನಿ, ಹುಮನಾಬಾದ್: ತಾಲ್ಲೂಕಿನ ಡಾಕುಳಗಿ ಗ್ರಾಮಕ್ಕೆ ಶಾಸಕ ಡಾ. ಸಿದ್ಧಲಿಂಗಪ್ಪಾ ಪಾಟೀಲ ಅವರು ಮಂಗಳವಾರ ಭೇಟಿ ನೀಡಿದರು. ಬಳಿಕ ಗ್ರಾಮಸ್ಥರೊಂದಿಗೆ, ಗ್ರಾಮದಲ್ಲಿ ಸಂಚರಿಸಿ, ಮಳೆಯಿಂದ ಹಾನಿಯಾದ ಮನೆಗಳನ್ನು ಪರಿಶೀಲನೆ ನಡೆಸಿದರು.
ಕಾರಂಜಾ ಜಲಾಶಯ ಒಳಹರಿವು ನೀರಿನಿಂದ ಗ್ರಾಮದ ಮತ್ತು ರೈತರ ಜಮೀನಿನಲ್ಲಿ ಆದ ಬೆಳೆ ಹಾನಿ, ರಸ್ತೆ ಮತ್ತು ವಿದ್ಯುತ್ತ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗ ಗ್ರಾಮದ ಕುಂದು ಕೊರತೆಗಳನ್ನು ಇತ್ಯಾರ್ಥಗೊಳಿಸಲಾಗುವುದು ಎಂದು ಗ್ರಾಮದ ಜನರಿಗೆ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಅಂಜುಮ ತಬ್ಬಸುಮ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ, ಕಾರಂಜಾ ಜಲಾನಯನ ಯೋಜನೆ ಸಹಾಯಕ ಅಭಿಯಂತರ ವಿಘ್ನೇಷ, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಗೋವಿಂದ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಮೇಶಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ, ಯುವ ಉದ್ಯಮಿ ಸಂತೋಷ ಪಾಟೀಲ, ಗ್ರಾಮದ ಯುವ ಮುಖಂಡ ಶಾಧೀರ ಮಿಯ್ಯಾ, ಗ್ರಾ.ಪಂ ಸದಸ್ಯರಾದ ಶಾಫಿ, ಶೆಟ್ಟಿ ಅತಿವಾಳ, ಬಿಜೆಪಿ ಮಂಡಲ ಅಧ್ಯಕ್ಷ ಅನಿಲ ಪಸಾರ್ಗಿ, ಪ್ರಮುಖರಾದ ಸೂರ್ಯಕಾಂತ ಪಾಟೀಲ, ನಾಗಭೂಷಣ ಸಂಗಮ, ಸಂತೋಷ ಯಾದವ, ಗ್ರಾಮದ ಮುಖಂಡರಾದ ಅಪ್ಪಾರಾವ ಡಾಕುಳಗಿ, ಮಹೇಶ ರೆಡ್ಡಿ, ಸಂತೋಷ ಸೋನಿ, ದೇವರಾಜ ಅಣದೂರ, ವಿದ್ಯಾಸಾಗರ ಡಾಕುಳಗಿ, ಇದ್ದರು.
