ಉದಯವಾಹಿನಿ, ಕಲಬುರಗಿ: ಇಂದಿನ ವಿದ್ಯಾರ್ಥಿಗಳು ಸಂಸ್ಕಾರ ಮತ್ತು ಒಳ್ಳೆಯ ಸ್ವಭಾವ ಹೊಂದಿರಬೇಕು ಆಗ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಡಾ.ಎನ್ ಜಿ. ಕಣ್ಣೂರ ಹೇಳಿದರು. ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರಗಿಯ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಸರಕಾರಿ ಮಹಾವಿದ್ಯಾಲಯ ಕಲಬುರಗಿ ಅವರು ಏರ್ಪಡಿಸಿರುವ “ಸ್ವಭಾವ ಸ್ವಚ್ಛತೆ,ಸಂಸ್ಕಾರ ಸ್ವಚ್ಛತೆ” ಕೇಂದ್ರ ಪುರಸ್ಕøತ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಈ ಅಭಿಯಾನವನ್ನು 14- ಸೆಪ್ಟೆಂಬರ್ ರಿಂದ 2-ಅಕ್ಟೋಬರ್ -2024 ವರೆಗೆ ನಡೆಯಲಿರುವ. ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು. ಇಂದಿನ ವಿದ್ಯಾರ್ಥಿಗಳು ಒಳ್ಳೆಯ ಸ್ವಭಾವ ಮತ್ತು ಸಂಸ್ಕಾರಗಳನ್ನು ಹೊಂದಿರಬೇಕು ಆಗ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯರಾದ ವಿಜಯಕುಮಾರ್ ಕಟ್ಟಿಮನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ಅವರು ವಹಿಸಿದರು. ಅತಿಥಿಗಳಾಗಿ ಡಾ. ರಾಜಕುಮಾರ್ ಸಲಗರ,ಡಾ.ಅಡಿವೇಶ ಹಾಗೂ ಎನ್ ಎಸ್.ಎಸ್. ಅಧಿಕಾರಿಗಳಾದ ಡಾ.ನಾಗಪ್ಪ ಗೋಗಿ, ಡಾ.ಬಲಭೀಮ ಸಾಂಗ್ಲಿ, ಡಾ. ಶಿವಲಿಂಗಪ್ಪ ಪಾಟೀಲ, ಡಾ.ರವಿ ಭೌದ್ದೆ ವೇದಿಕೆ ಮೇಲೆ ಇದ್ದರು. ಡಾ.ಶ್ರೀಮಂತ ಹೊಳಕರ, ಡಾ.ವಿಜಯಕುಮಾರ ಗೋಪಾಳೆ, ಪೆÇ್ರ.ರಹಿಮಾನ, ಭಾಗವಹಿಸಿದರು.
ಡಾ. ರವಿ ಭೌದ್ಧ ಸ್ವಾಗತಿಸಿದರು, ರವಿಕಿರಣ್ ಪ್ರಾರ್ಥಿಸಿದರು, ಬಲಭೀಮ ಸಾಂಗ್ಲಿನಿರೂಪಿಸಿದರು. ಡಾ. ನಾಗಪ್ಪ ಗೋಗಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸ್ವಚ್ಛತಾ ಅಭಿಯಾನದ ಪ್ರತಿಜ್ಞೆಯನ್ನು ಮಾಡಿದರು.

Leave a Reply

Your email address will not be published. Required fields are marked *

error: Content is protected !!