ಉದಯವಾಹಿನಿ, ಲಕ್ಷ್ಮೇಶ್ವರ : ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಲಕ್ಷ್ಮೇಶ್ವರ ತಾಲೂಕ ಘಟಕದ ವತಿಯಿಂದ ತಹಶೀಲ್ದಾರ್ ಕಾರ್ಯಾಲಯದ ಮುಂದೆ ಕೈಗೆ ಕಪ್ಪುಬಟ್ಟಿ ಕಟ್ಟಿಕೊಂಡು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು ಅನರ್ದಿಷ್ಟಾವಧಿಯ ಮುಷ್ಕರವನ್ನು ಆರಂಭಿಸಿದರು.
ಮಾತನಾಡಿದ ತಾಲೂಕ ಸಂಘದ ಅಧ್ಯಕ್ಷ ಡಿಎಲ್ ಕುಲಕರ್ಣಿಯವರು ಸರ್ಕಾರ ಕಂದಾಯ ಇಲಾಖೆಯಲ್ಲಿ ಈಗಾಗಲೇ 17 ನೂತನವಾದ ವೆಬ್ ಮತ್ತು ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿದ್ದು ಅವುಗಳ ಮೂಲಕ ಕಾರ್ಯನಿರ್ವಹಿಸುವಂತೆ ಒತ್ತಡ ಹೇರಲಾಗುತ್ತಿದೆ.
ಮೂಲ ಸೌಲಭ್ಯಗಳಾದ ಮೊಬೈಲ್ ಇಂಟರ್ನೆಟ್ಟು ಸ್ಕ್ಯಾನರ್ ಲ್ಯಾಪ್ಟಾಪು ಏನನ್ನು ನೀಡದೆ ತ್ವರಿತವಾಗಿ ಮಾಹಿತಿ ನೀಡುವಂತೆ ಒತ್ತಾಯಿಸಲಾಗುತ್ತಿದೆ ಇಲಾಖೆಯ ಕೆಲಸ ಕಾರ್ಯಗಳಲ್ಲದೆ ಅನ್ಯ ಇಲಾಖೆ ಕೆಲಸಗಳನ್ನು ಗ್ರಾಮ ಆಡಳಿತ ಅಧಿಕಾರಿಗಳು ಒತ್ತಡದ ಬದುಕಿನಲ್ಲಿ ಕಾಲ ಕಳೆಯುತ್ತಿದ್ದು ಮಾಹಿತಿ ಪೆÇರೆಸದ ಗ್ರಾಮ ಆಡಳಿತ ಅಧಿಕಾರಿಗಳನ್ನು ಅಮಾನತುಗೊಳಿಸುವಂತಹ ಪ್ರಕ್ರಿಯೆಯನ್ನು ಹಿರಿಯ ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ ಮೇಲಾಗಿ ಕೆಸಿಎಸ್‍ಆರ್ ಆಕ್ಟ್ ಪ್ರಕಾರ ತಾಂತ್ರಿಕ ಹುದ್ದೆಗೆ ಮೇಲ್ದರ್ಜೆಗೆ ಏರಿಸಿ ಗ್ರೇಡ್ -1 ನೀಡಬೇಕು ಎಂಬ ಸುಮಾರು 21 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು ನಂತರ ಗ್ರಾಮ ಆಡಳಿತ ಅಧಿಕಾರಿಗಳು ಗ್ರೇಡ್ 2 ತಹಸಿಲ್ದಾರ್ ಮಂಜುನಾಥ್ ಅಮಾಸಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳಾದ ಎಚ್ ಕೃಷ್ಣಮೂರ್ತಿ ಫಾತಿಮಾ ಫತೇಖಾನ ಜಿ. ಡಿ ಹವಳದ ಕೆಎಸ್ ಪಾಟೀಲ್ ಎಸ್ ಬಿ ಕನೋಜ ಡಿಎಲ್ ವಿಭೂತಿ ಆರ್ ಎನ್ ನೆಗಳೂರ ಬಿವೈ ಮಲ್ಲಿಗವಾಡ ಸುಬೇದ್ ಖಾನ್ ಪಠಣ ಅರುಣ ದೊಡ್ಡಮನಿ ಪುಷ್ಪ ವಡಕಪ್ಪನವರ ನಿರ್ಮಲ ಕೊಪ್ಪದ ಮಠ ಲಕ್ಷ್ಮೀ ಓಲೆಕಾರ ತಸ್ಲೀಮಾ ಮುಲ್ಲಾ ಇದ್ದರು.
