ಉದಯವಾಹಿನಿ, ಬೆಂಗಳೂರು: ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡಲಾಗಿದ್ದು, ಖಾತೆ ಹಂಚಿಕೆ ಇವತ್ತು ಅಥವಾ ನಾಳೆ ಮಾಡುತ್ತೇವೆ. ಸಿಎಂ ಬಿಟ್ಟು 33 ಮಂದಿ ಸಂಪುಟ ದರ್ಜೆ ಸಚಿವರನ್ನಾಗಿ ಮಾಡಿದ್ದೇವೆ. ಮೊದಲ ಬಾರಿ ಗೆದ್ದವರನ್ನು ಮಂತ್ರಿ ಮಾಡಿಲ್ಲ. ಮೂರು-ನಾಲ್ಕು ಬಾರಿ ಗೆದ್ದವರನ್ನು ಸಚಿವರನ್ನಾಗಿ ಮಾಡಿದ್ದೇವೆ.ಹೊಸ ಮುಖ, ಹಿರಿಯರು ಎಲ್ಲರನ್ನೂ ಸೇರಿಸಿ ಸಚಿವ ಸಂಪುಟ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೆಲವು ಮಾನದಂಡಗಳನ್ನು ಮುಂದಿಟ್ಟುಕೊಂಡು ಸಂಪುಟ ರಚಿಸಿದ್ದೇವೆ. ಕೊಡಗು, ಹಾಸನ, ಚಿಕ್ಕಮಗಳೂರು, ಹಾಸನ , ಹಾವೇರಿ ಜಿಲ್ಲೆಗಳು ಹಾಗೂ ಹೊಸ ಶಾಸಕರಿಗೆ ಸಚಿವ ಸ್ಥಾನ ಕೊಟ್ಟಿಲ್ಲ. ಸಮಾಧಾನ, ಅಸಮಧಾನ ಇರುವುದು ಸಹಜ. ಅಸಮಧಾನದ ಜತೆ ಸಮಾಧಾನ ಇದೆ. ಪಕ್ಷದ ಎಲ್ಲರೂ ಇದನ್ನು ಒಪ್ಪಿಕೊಂಡಿದ್ದಾರೆ ಎಂದರು.
