ಉದಯವಾಹಿನಿ, ಕೊಲ್ಹಾರ: ರೈತ ಭಾರತ ಪಕ್ಷದ ವತಿಯಿಂದ ಭ್ರಷ್ಟಾಚಾರ ಹಠಾವೋ ಹೆಸ್ಕಾಂ ಬಚಾವೋ ಪಾದಯಾತ್ರೆ ಗುರುವಾರ ಪಟ್ಟಣಕ್ಕೆ ಆಗಮಿಸಿತು. ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ನೇತೃತ್ವದಲ್ಲಿ ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಹಮ್ಮಿಕೊಂಡಿರುವ ಈ ಪಾದಯಾತ್ರೆಯು ವಿಜಯಪುರದಿಂದ ಹುಬ್ಬಳ್ಳಿಯ ಹೆಸ್ಕಾಂ ನಿಗಮಕ್ಕೆ ಮುಕ್ತಾಯಗೊಳ್ಳಲಿದೆ.
ರೈತಾಪಿವರ್ಗದ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊAಡು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಪ್ರಮುಖವಾಗಿ ೨೨ ನವೆಂಬರ ೨೦೨೩ ರ ಸಚಿವ ಸಂಪುಟ ಸಭೆಯಲ್ಲಿ ರೈತ ವಿರೋಧಿ ನಿರ್ಣಯ ಹಿಂಪಡೆಯಬೇಕು, ರೈತರಿಗೆ ಶೀಘ್ರವೇ ಕೃಷಿ ಸಂಪರ್ಕ ಯೋಜನೆ ಜಾರಿ ಮಾಡುವುದು, ಕೋಲ್ಹಾರಕ್ಕೆ ಹೆಸ್ಕಾಂ ಉಪವಿಭಾಗಿ ಹಾಗೂ ಮುಳವಾಡಕ್ಕೆ ಹೆಸ್ಕಾಂ ಶಾಖಾ ಕಛೇರಿ ಮಂಜೂರು ಮಾಡುವುದು, ೨೦೧೫ರಲ್ಲಿ ತುಂಬಿದ ಫಲಾನುಭವಿಗಳಿಗೆ ಆರ್.ಆರ್.ಸಂಖ್ಯೆ ಹಾಗೂ ಮೂಲಭೂತ ಸೌಕರ್ಯ ನೀಡುವುದು, ರೈತರಿಗೆ ೧೨ ಘಂಟೆ ೩ ಫೇಸ್ ವಿದ್ಯುತ್ ಪೂರೈಸಬೇಕು, ಸುಟ್ಟ ಟಿಸಿಗಳನ್ನು ೪೮ ಗಂಟೆಗಳಲ್ಲಿ ಕೂಡಿಸುವ ವ್ಯವಸ್ಥೆ ಕಲ್ಪಿಸಬೇಕು.
ರೈತರ ತೋಟದ ಮನೆಗಳಿಗೆ ರಾತ್ರಿ ಹೊತ್ತಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿಂಗಲ್ ಫೇಸ್ ವಿದ್ಯುತ್ ಸಂಪರ್ಕ ನೀಡುವುದು, ಹೆಸ್ಕಾಂ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಬೇಕು, ಅವೈಜ್ಞಾನಿಕ ಕಾಮಗಾರಿಗಳ ತನಿಖೆಯಾಗಬೇಕು, ಮಾಹಿತ ತಂತ್ರಜ್ಞಾನದ ನುರಿತ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದು.
