ಉದಯವಾಹಿನಿ, ಬೆಂಗಳೂರು: ಮುಡಾ ಪ್ರಕರಣದಲ್ಲಿ ಮತ್ತಷ್ಟು ಆಳಕ್ಕಿಳಿದಿರುವ ಜಾರಿ ನಿರ್ದೇಶನಾಲಯ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸಿದ್ದ 18 ಅಧಿಕಾರಿಗಳ ವಿರುದ್ಧ ಇಸಿಐಆರ್ ದಾಖಲಿಸಿಕೊಂಡಿದೆ. ವಿಶೇಷ ಎಂದರೆ ಸೋಮವಾರವಷ್ಟೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದು ಮಲ್ಲಿಕಾರ್ಜುನ, ಭೂ ಮಾಲೀಕ ದೇವರಾಜ್ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಇಎಂಎಲ್ಎ)ಯಡಿ ದೂರು ದಾಖಲಿಸಿತ್ತು. ಇದೀಗ ಇ.ಡಿ ಅ„ಕಾರಿಗಳು ಮುಡಾದಲ್ಲಿ ಕಾರ್ಯ ನಿರ್ವಹಿಸಿದ್ದ 18 ಅ„ಕಾರಿಗಳ ವಿರುದ್ಧ ಇಂಫೋರ್ಸ್ನಮೆಂಟ್ ಕೇಸ್ ಇನ್ಫರ್ಮೇಷನ್ ರಿಪೊರ್ಟ್ ದೂರು ದಾಖಲಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಹಿನಕಲ್ ಸರ್ವೇ ನಂಬರ್ 89ರಲ್ಲಿ ಮುಡಾದಿಂದ ನಿವೇಶನ ಹಂಚಿಕೆಯಾಗಿತ್ತು. 350ಕ್ಕೂ ಹೆಚ್ಚು ಪ್ರಭಾವಿಗಳಿಗೆ 7.18 ಎಕರೆ ಜಮೀನನ್ನು ಹಂಚಿಕೆ ಮಾಡಿದ ಆರೋಪವಿದೆ. ಇದಕ್ಕೆ ಸಂಬಂ„ಸಿದಂತೆ 2017ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 18 ಅಧಿಕಾರಿಗಳ ವಿರುದ್ಧ ಇಸಿಐಆರ್ ದಾಖಲಾಗಿದೆ.
