ಉದಯವಾಹಿನಿ, ಸೋಲ್: ೮೧ ವರ್ಷದ ಅಜ್ಜಿ ಚೋಯ್ ಸೂನ್-ಹ್ಯಾ ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ನಡೆದ ಮಿಸ್ ಯೂನಿವರ್ಸ್ ಕೊರಿಯಾ ಸ್ಪರ್ಧೆಯಲ್ಲಿ ತನ್ನ ಮೊಮ್ಮಗಳ ವಯಸ್ಸಿನ ಪ್ರತಿಸ್ಪರ್ಧಿಗಳ ವಿರುದ್ಧ ಭಾಗವಹಿಸಿ ದಾಖಲೆ ನಿರ್ಮಿಸಿದ್ದಾರೆ.ಮಿಸ್ ಯೂನಿವರ್ಸ್ ಕೊರಿಯಾ ಪಟ್ಟ ಜಸ್ಟ್ ಮೀಸ್ ಆಗಿದೆ.
ಆದರೆ ಅಜ್ಜಿಗೆ ಮಿಸ್ ಯೂನಿವರ್ಸ್ ಕೊರಿಯಾ ಕಿರೀಟ ಸಿಗದಿದ್ದರೂ ಬೆಸ್ಟ್ ಡ್ರೆಸ್ಸರ್ ಪ್ರಶಸ್ತಿ ಸಿಕ್ಕಿದೆ.
ಹದಿಹರೆಯದ ಯುವತಿಯರೊಂದಿಗೆ ಸ್ಪರ್ಧಿಸಿ ಸೊಂಟ ಬಳುಕಿಸಿದ್ದಾರೆ. ಮಾರ್ಜಾಲ ನಡಿಗೆಯೊಂದಿಗೆ ನಡೆದಿದ್ದಾರೆ. ಅವರ ಯುವತಿಯನ್ನು ನಾಚಿಸುವ ನಡೆ ಕಂಡು ಪ್ರೇಕ್ಷಕರು ಬೆಕ್ಕಸ ಬೆರಗಾಗಿದ್ದಾರೆ.ಸ್ಪರ್ಧಿಸಲು ಬೇಕಾಗುವ ಎಲ್ಲಾ ಸಂಗತಿಗಳನ್ನೂ ಕರತಲಾಮಲಕ ಮಾಡಿಕೊಂಡಿದ್ದಾರೆ. ಮಣಿಗಳಿಂದ ಕೂಡಿದ ಬಿಳಿ ನಿಲುವಂಗಿಯನ್ನು ಧರಿಸಿ, ಬೆಳ್ಳಿ ಕೂದಲಿನ ಚೋಯ್ ಸೂನ್-ಹ್ವಾ ಅವರು ವೇದಿಕೆಯ ಉದ್ದಕ್ಕೂ ಅಡ್ಡಾಡಿದ್ದಾರೆ. ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿರುವ ಹೋಟೆಲ್‌ನಲ್ಲಿ ಸೋಮವಾರ ಸೆ. ೩೦ರಂದು ನಡೆದ ಮಿಸ್ ಯೂನಿವರ್ಸ್ ಕೊರಿಯಾ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
೭೦ ರ ದಶಕದಲ್ಲಿ ತನ್ನ ಮಾಡೆಲಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದ ಚೋಯ್, ಈ ತಿಂಗಳ ಆರಂಭದಲ್ಲಿ ೩೧ ಇತರ ಸ್ಪರ್ಧಿಗಳೊಂದಿಗೆ ಮಿಸ್ ಯೂನಿವರ್ಸ್ ಕೊರಿಯಾ ಫೈನಲಿಸ್ಟ್ ಎಂದು ಘೋಷಿಸಲಾಗಿದೆ. ೨೨ ವರ್ಷದ ಫ್ಯಾಷನ್ ಶಾಲೆಯ ವಿದ್ಯಾರ್ಥಿ ಹಾನ್ ಏರಿಯಲ್ ಈ ಸ್ಪರ್ಧೆಗಳಲ್ಲಿ ಮಿಸ್ ಕೊರಿಯನ್ ಕಿರೀಟವನ್ನು ಗೆದ್ದರು. ನವೆಂಬರ್‌ನಲ್ಲಿ ಮೆಕ್ಸಿಕೋದಲ್ಲಿ ನಡೆಯುವ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಅವರು ದಕ್ಷಿಣ ಕೊರಿಯಾವನ್ನು ಪ್ರತಿನಿಧಿಸಲಿದ್ದಾರೆ.
