ಉದಯವಾಹಿನಿ,ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಗುಂಡಿ ಮುಚ್ಚಲು ನೀಡಿದ ಕಾಲಾವಧಿ ಇತ್ತೀಚೆಗಷ್ಟೇ ಮುಗಿದಿದೆ ಆದರೆ ನಗರದ ಜನರು ಮಾತ್ರ ಗುಂಡಿಗಳಿಂದ ಮುಕ್ತಿ ಪಡೆಯುತ್ತಿಲ್ಲ. ನಗರದ ಹೊರವಲಯದ ಚಿಕ್ಕಸಂದ್ರ ಮುಖ್ಯರಸ್ತೆಯಿಂದ ನಾಮಘಟ್ಟ ರಸ್ತೆವರೆಗಿನ ಮುಖ್ಯರಸ್ತೆಗಳಲ್ಲಿನ ಹಲವು ಗುಂಡಿಗಳು ಮುಚ್ಚದೆ ಹಾಗೆ ಉಳಿದು ಅನಾಹುತಕ್ಕೆ ದಾರಿಯಾಗಿದೆ.

ಬೆಂಗಳೂರು ನಗರವನ್ನು ಬ್ರಾಂಡ್ ಬೆಂಗಳೂರು ಮಾಡಬೇಕು ಎನ್ನುವುದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕನಸು. ಹೀಗಾಗಿ ನಗರದಲ್ಲಿನ ಗುಂಡಿ ಮುಚ್ಚಲು ಬಿಬಿಎಂಪಿ ಅಧಿಕಾರಿಗಳಿಗೆ ಕಾಲಾವಧಿ ನೀಡಿ ತಾಕೀತು ಮಾಡಲಾಗಿದೆ.ಕಾಲಾವಧಿ ಮುಗಿದು ಈಗಾಗಲೇ ಹಲವು ದಿನಗಳು ಕಳೆದಿವೆ. ಆದರೆ ಚಿಕ್ಕಸಂದ್ರ ಮುಖ್ಯರಸ್ತೆಯಿಂದ ಹಲವು ಮುಖ್ಯರಸ್ತೆಗಳು ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ನೇಮಘಟ್ಟ ರಸ್ತೆ ಗುಂಡಿಗಳಿಂದ ಕೂಡಿದ್ದು ಅವ್ಯವಸ್ಥೆಯ ಆಗರವಾಗಿದೆ. ಗಡುವು ನೀಡಿದರೂ ಈ ವಿಧಾನಸಭಾ ಕ್ಷೇತ್ರದಲ್ಲಿ ಜನರ ಮಾತು ಕೇಳುವವರೇ ಇಲ್ಲದಂತಾಗಿದೆ. ಈ ಕುರಿತು ಹಲವು ಬಾರಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಹಾಗೆಯೇ ಉಳಿದಿದೆ. ಹೀಗಾಗಿ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ಮಂಡಿ ಉದ್ದದ ಗುಂಡಿಗಳು ವಾಹನ ಸವಾರರ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿದೆ.
ನಗರದಲ್ಲಿ ಮಳೆ ಸುರಿದಾಗಲೆಲ್ಲಾ ರಸ್ತೆ ಗುಂಡಿಗಳಿಂದ ಅನಾಹುತಗಳು ಸಂಭವಿಸುತ್ತಲೇ ಇದ್ದರೂ, ಶಾಶ್ವತ ಪರಿಹಾರಗಳು ಮಾತ್ರ ಸಿಕ್ಕಿಲ್ಲ ಎಂದು ಸ್ಥಳೀಯ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳುವಂತೆ ಸ್ಥಳೀಯ ಜನರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!