ಉದಯವಾಹಿನಿ, ಹರಪನಹಳ್ಳಿ : ಶಿಕ್ಷಣ ಜೊತೆಗೆ ಸಂಸ್ಕಾರ, ಸತ್ಕಾರ ಇರಬೇಕು ಆಗ ಮಾತ್ರ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ತಂದೆ ತಾಯಿಗಳಿಗೆ ರಾಜ್ಯಕ್ಕೆ, ರಾಷ್ಟ್ರಕ್ಕೆ ಗೌರವ ಸಿಗುತ್ತದೆ ಎಂದು ಹೊಸದುರ್ಗ ಭಗೀರಥ ಪೀಠದ ಡಾ.ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ ಹೇಳಿದರು.ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ತಾಲೂಕು ಉಪ್ಪಾರ ನೌಕರರ ಸಂಘದ ವತಿಯಿಂದ ಭಾನುವಾರ ಎಸ್ಸೆಸ್ಸೆಲ್ಸಿ ಹಾಗೂ ಪಿ.ಯುಸಿ ಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಡ್ತಿ ಹಾಗೂ ನಿವೃತ್ತಿ ಹೊಂದಿದ ನೌಕರರಿಗೆ ಸನ್ಮಾನ ಕಾರ್ಯಕ್ರಮದ ಸಾನಿದ್ಯವಹಿಸಿ ಮಾತನಾಡಿದರು.ಶಿಕ್ಷೆ ಇಲ್ಲದೆ ಶಿಕ್ಷಣ ಸಾಧ್ಯವಿಲ್ಲ, ಮಿತಿ ಇಲ್ಲದ ಜ್ಞಾನ ಒಂದು ಸಾರಿ ಪಡೆದುಕೊಂಡರೆ ಬಂಡೆಗಲ್ಲು ಹಾಗೆ ಗಟ್ಟಿ ಆಗುತ್ತದೆ, ಜ್ಞಾನ ನೀನು ಇರುವರೆಗೂ ನಿನ್ನ ಜೊತೆಗಿರುತ್ತದೆ, ವಿದ್ಯೆ ಪಡೆದ ಜ್ಞಾನಿ ಎಲ್ಲಾ ಕಡೆಗೆ ಗೌರವ ಪ್ರೀತಿಗೆ ಪಾತ್ರವಾಗುತ್ತಾರೆ ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಲೇಪಾಕ್ಷಪ್ಪ ವಿಶೇಷ ಉಪನ್ಯಾಸ ನೀಡಿ ಇದು ಸ್ಪೂರ್ತಿ ನೀಡುವಂತಹ ಕಾರ್ಯಕ್ರಮವಾಗಿದ್ದು, ನಾವು ಯಾವಾಗಲೂ ವಿಚಾರವಂತರಾಗಬೇಕು. ಬುದ್ಧಿವಂತರಾಗಬೇಕು ಸೃಜನಶೀಲರಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ವರು ಪೋಷಕರು ಮಕ್ಕಳಿಗೆ ಮೊಬೈಲ್, ಟಿವಿ ಧಾರವಾಹಿಗಳಿಂದ ದೂರವಿಡಬೇಕು ಎಂದು ಸಲಹೆ ನೀಡಿದರು.
ರಾಜ್ಯ ಉಪ್ಪಾರರ ನೌಕರ ಸಂಘದ ಅಧ್ಯಕ್ಷ ಎಸ್.ಎನ್.ಚಂದ್ರಪ್ಪ ಮಾತನಾಡಿ ಪ್ರತಿ ವರ್ಷ ನಾನು ಉಪ್ಪಾರ ಸಮಾಜಕ್ಕೆ ನನ್ನದೊಂದು ಚಿಕ್ಕ ಅಳಿಲು ಸೇವೆ ನೀಡುತ್ತೇನೆ 1 ಲಕ್ಷ ರುಗಳನ್ನು ಬಡ ಮಕ್ಕಳಿಗೆ ಪುಸ್ತಕ ರೂಪದಲ್ಲಿ ನೀಡುತ್ತೇನೆ ಎಂದರು.ಡಾ. ಉಮೇಶ್ ಬಾಬು ಅವರು ತಾಲೂಕು ಉಪ್ಪರ ನೌಕರ ಸಂಘಕ್ಕೆ 50ಸಾವಿರ ಚೆಕ್ಕನ್ನು ನೀಡಿದರು. ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್ ಸಂಗಪ್ಪನವರ, ನೌಕರ ಸಂಘದ ಅಧ್ಯಕ್ಷ ಕೆ ಅಂಜನಪ್ಪ. ಸಾರಿಗೆ ಘಟಕದ ವ್ಯವಸ್ಥಾಪಕಿ ಎಂ. ಮಂಜುಳಾ, ಉಪ್ಪಾರ ಸಮಾಜದ ಅಧ್ಯಕ್ಷ ಟಿ.ತಿಮ್ಮಪ್ಪ, ಕೆ.ತಿಮ್ಮಪ್ಪ ಸವಿತಾ ಎಂ,ಪಿ.ಗಣೇಶ. ಅಂಜಿನಪ್ಪ, ಪಿ ಸುಮಾ, ಕಾಡಜ್ಜಿ ಮಂಜುನಾಥ, ಎಸ್ ರಾಮಪ್ಪ. ಶಿಕ್ಷಕರ ಸಂಘದ ಅದ್ಯಕ್ಷ ಬಿ. ರಾಜಶೇಖರ್. ಬಿ. ಚಂದ್ರಮೌಳಿ. ಸುಭದ್ರಮ್ಮ ಕೆ ಶೈಲಜಾ. ಕಬ್ಬಳ್ಳಿ ಗೀತಾ. ಗಿರಿಜಾ. ಲಕ್ಷ್ಮಿ ದೇವಿ.ನಾಗರಾಜ್ ಯು.ಹುಚ್ಚಪ್ಪ ಬಣಕಾರ್. ಬಸವರಾಜ ಎ.ಅಗ್ನಿಶಾಮಕ ದಳ. ರಾಮಚಂದ್ರಪ್ಪ. ಪ್ರಕಾಶ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!