ಉದಯವಾಹಿನಿ, ತಿರುಪತಿ: ತಿರುಮಲ ಶ್ರೀಗಳ ದರ್ಶನಕ್ಕೆ ಶಿಫಾರಸ್ಸು ಪತ್ರಗಳ ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಯಾವುದೇ ಶಿಫಾರಸ್ಸುಗಳಿಲ್ಲದೆ ಜನಸಾಮಾನ್ಯರು ಸುಲಭವಾಗಿ ತಿರುಮಲ ಶ್ರೀಕ್ಷೇತ್ರಕ್ಕೆ ಭೇಟಿ ನೀಡುವಂತೆ ಮುಂಗಡ ಬುಕಿಂಗ್‌ ವ್ಯವಸ್ಥೆ ಜಾರಿಗೆ ತರಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಇತ್ತೀಚಿನ ಪರಿಶೀಲನೆಯಲ್ಲಿ ಹಲವು ಸಲಹೆಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.
ವಿಶ್ವಾದ್ಯಂತ ಲಕ್ಷಾಂತರ ಜನರ ದೈನಂದಿನ ಜೀವನದ ಭಾಗವಾಗಿರುವ ವಾಟ್ಸಾಪ್‌ ಮೂಲಕವೇ ಟಿಕೆಟ್‌ ಬುಕ್‌ ಮಾಡಲು ಅನುಕೂಲವಾಗುವಂತೆ ಆಂಧ್ರಪ್ರದೇಶ ಸರ್ಕಾರ ಚಿಂತನೆ ನಡೆಸಿದೆ.ವಾಟ್ಸಾಪ್‌ ಮೂಲಕ ಸುಲಭವಾಗಿ ಸಿನಿಮಾ ಟಿಕೆಟ್‌, ಗ್ಯಾಸ್‌‍ ಬುಕ್ಕಿಂಗ್‌, ಫ್ಲೈಟ್‌ ಟಿಕೆಟ್‌ ಬುಕ್‌ ಮಾಡುವಾಗ, ಭಕ್ತರು ತಮ ಇಚ್ಛೆಯ ದಿನದಂದು ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶ ಹೊಂದಿದೆ.
ತಿರುಮಲ ತಿರುಪತಿ ದೇವಸ್ಥಾನದಿಂದ ವಾಟ್ಸಪ್‌ ಮೂಲಕ ದರ್ಶನ ಬುಕ್ಕಿಂಗ್‌ ಸೇವೆ ಆರಂಭಿಸಿ ಹಂತಹಂತವಾಗಿ ಎಲ್ಲ ದೇವಸ್ಥಾನಗಳಲ್ಲೂ ಲಭ್ಯವಾಗುವಂತೆ ಹಾಗೂ ಶ್ರೀವಾರಿ ದರ್ಶನದ ಜೊತೆಗೆ ಇತರೆ ಸೇವೆಗಳ ಬೆಲೆಯನ್ನು ಕಡಿಮೆ ವೆಚ್ಚದಲ್ಲಿ ಸಾಧ್ಯವಾದಷ್ಟು ಸೌಲಭ್ಯ ಕಲ್ಪಿಸುವ ಸರ್ಕಾರದ ಆಲೋಚನೆಯಾಗಿದೆ.ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರಿಗೆ ಒದಗಿಸುವ ಸೇವೆ ಹಾಗೂ ಇತರೆ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಲಭ್ಯವಿರುವ ಬೆಲೆಗಳನ್ನು ಪರಿಶೀಲಿಸಿ ಅನುಕೂಲ ಕಲ್ಪಿಸಲಾಗುತ್ತದೆ ಎಂದು ಹೇಳಲಾಗಿದೆ.ತಿರುಮಲ ದೇವಸ್ಥಾನದ ಲಡ್ಡು ವಿವಾದದಲ್ಲಿ ಸುಪ್ರೀಂಕೋರ್ಟ್‌ನ ಹೇಳಿಕೆಗಳಿಂದ ಯಾರೂ ಎದೆಗುಂದಬಾರದು. ಸಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಮೇಲೆ ತಂದಿರುವ ಹಲವಾರು ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಲಾಗಿದ್ದು, ಭಕ್ತರು ಇದನ್ನು ಗುರುತಿಸುತ್ತಿದ್ದಾರೆ. ಭಕ್ತರಿಗೆ ಮಾಡಿದ ಸೌಲಭ್ಯಗಳು ನಮ ಕೈಹಿಡಿಯುವ ಭರವಸೆ ಇದೆ ಎಂದು ನಾಯ್ಡು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!