ಉದಯವಾಹಿನಿ, ಕೊಪ್ಪಳ: ಮುಖ್ಯಮಂತ್ರಿಯವರ ಕಾನ್ವೆಗೆ ಎದುರಾಗಿ ಏಕಮುಖ ಸಂಚಾರ ಮಾರ್ಗದಲ್ಲಿ ಕಾರು ಚಲಾಯಿಸಿ ದರ್ಪ ಪ್ರದರ್ಶಿಸಿದ ಶಾಸಕ ಜನಾರ್ಧನ ರೆಡ್ಡಿ ಅವರ ವರ್ತನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ರಾಯಚೂರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಂದ ಏರ್‌ಪೋರ್ಟ್‌ನತ್ತ ಪ್ರಯಾಣಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಾಹನ ಹಾಗೂ ಬೆಂಗಾವಲು ಪಡೆಗಾಗಿ ಗಂಗಾವತಿಯಲ್ಲಿ ಪೊಲೀಸರು ಇತರ ವಾಹನಗಳನ್ನು ತಡೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.
ವಾಹನಗಳನ್ನು ತಡೆದು ಸುಮಾರು 20 ನಿಮಿಷಗಳ ಕಾಲ ನಿಲ್ಲಿಸಿದರು ಎಂಬ ಅಸಹನೆಗೆ ಈಡಾದ ಶಾಸಕ ಜನಾರ್ಧನ ರೆಡ್ಡಿಯವರು ತಾವೇ ರೇಂಜ್‌ರೋವರ್ ಕಾರನ್ನು ಚಲಾಯಿಸಿಕೊಂಡು ಡಿವೈಡರ್ ಅನ್ನು ಹತ್ತಿಸಿ ಏಕಮುಖ ಸಂಚಾರ ಮಾರ್ಗದಲ್ಲಿ ಮುಖ್ಯಮಂತ್ರಿಯವರ ಕಾನ್ವೆಗೆ ಎದುರಾಗಿ ಹೋಗಿದ್ದಾರೆ.ಇದರಿಂದ ತಬ್ಬಿಬ್ಬಾದ ಬೆಂಗಾವಲು ಪಡೆ ಕೆಲಕ್ಷಣ ತಮ ವಾಹನಗಳನ್ನೇ ಸ್ಥಗಿತಗೊಳಿಸಿದೆ. ಜನಾರ್ಧನ ರೆಡ್ಡಿಯವರ ಕಾರು ಮುಂದಕ್ಕೆ ಹೋದ ಬಳಿಕ ಮುಖ್ಯಮಂತ್ರಯವರು ಪ್ರಯಾಣ ಮುಂದುವರೆಸಿದ್ದಾರೆ.
