ಉದಯವಾಹಿನಿ, ನವದೆಹಲಿ: ಇಂದು  ಹೊಸ ಸಂಸತ್​ ಭವನದ ಒಳಗೆ ಪ್ರತಿಷ್ಠಾಪನೆ ಆಗಲಿರುವ ರಾಜದಂಡ ಸೆಂಗೋಲ್​ಗೆ ಅಗೌರವ ತೋರಿರುವ ಕಾಂಗ್ರೆಸ್​ ವಿರುದ್ಧ ಪ್ರಧಾನಿ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಈ ಪವಿತ್ರ ಸೆಂಗೋಲ್​​ಗೆ ತಕ್ಕ ಗೌರವ ನೀಡಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಈ ಸೆಂಗೋಲ್ ಅನ್ನು ಪ್ರಯಾಗ್‌ರಾಜ್‌ನ ಆನಂದ ಭವನದಲ್ಲಿ ವಾಕಿಂಗ್ ಸ್ಟಿಕ್ ಆಗಿ ಪ್ರದರ್ಶನಕ್ಕೆ ಇಡಲಾಗಿತ್ತು. ನಿಮ್ಮ ಸೇವಕ (ಮೋದಿ) ಮತ್ತು ನಮ್ಮ ಸರ್ಕಾರ ಆನಂದ ಭವನದಲ್ಲಿ ಇದ್ದ ಸೆಂಗೋಲ್​​ ಅನ್ನು ಹೊರಗಡೆ ತಂದಿದೆ ಎಂದು ಕಾಂಗ್ರೆಸ್​ ಅನ್ನು ಟೀಕಿಸಿದರು. ದೆಹಲಿಯ ತಮ್ಮ ನಿವಾಸದಲ್ಲಿ ಅಧೀನಂ ಶ್ರೀಗಳ ಜತೆ ಸಭೆ ನಡೆಸಿ, ಆಶೀರ್ವಾದ ಪಡೆದ ಬಳಿಕ ಮಾತನಾಡಿದರು. ಅಂದಹಾಗೆ ಈ ಕಾರ್ಯಕ್ರಮಕ್ಕೆ ಸುಮಾರು 60 ಧಾರ್ಮಿಕ ಮುಖ್ಯಸ್ಥರನ್ನು ಕರೆಸಲಾಗಿದ್ದು, ಅವರಲ್ಲಿ ಹಲವರು ತಮಿಳುನಾಡಿನವರಾಗಿದ್ದಾರೆ. ತಮಿಳುನಾಡಿನ ಅಧೀನರು ಅಥವಾ ಮಠಗಳು ಮೇಲ್ಜಾತಿ ಪ್ರಾಬಲ್ಯವನ್ನು ವಿರೋಧಿಸುವ ಇತಿಹಾಸವನ್ನು ಹೊಂದಿವೆ ಮತ್ತು ಧರ್ಮವನ್ನು ಜನಸಾಮಾನ್ಯರ ಬಳಿಗೂ ಕೊಂಡೊಯ್ಯುವಲ್ಲಿ ಹೆಸರುವಾಸಿಯಾಗಿದೆ. ಅಧಿಕಾರದ ಹಸ್ತಾಂತರಕ್ಕೆ ಸೆಂಗೋಲ್ ಅಥವಾ ರಾಜದಂಡವನ್ನು ಸಿದ್ಧಪಡಿಸುವ ಜವಬ್ದಾರಿಯನ್ನು ತಿರುವವಾಡುತುರೈ ಅಧೀನಮ್​ ಅಥವಾ ಮಠಕ್ಕೆ ನೀಡಲಾಗಿತ್ತು. ಈ ಅಧೀಮನ್​ 400 ವರ್ಷಗಳಷ್ಟು ಹಳೆಯದು.

Leave a Reply

Your email address will not be published. Required fields are marked *

error: Content is protected !!