ಉದಯವಾಹಿನಿ, ಆಳಂದ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ನವರಾತ್ರಿ ಉತ್ಸವ ಅಂಗವಾಗಿ ಮನೆ ಮನೆಗಳಲ್ಲಿ ಸೇರಿದಂತೆ ಸಾರ್ವಜನಿಕ ಸ್ಥಳ, ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿದ ದೇವಿಯ ಆರಾಧನೆ ಉತ್ಸವ ಎಂದಿನಂತೆ ಈ ಬಾರಿಯೂ ಸಾಂಸ್ಕøತಿಕ ಮೆರಗು ತಂದುಕೊಂಡಿದೆ.
ತುಳಜಾಪೂರದ ಅಂಬಾಬಾಯಿ ಹೆಸರಿನಲ್ಲಿ ಗೃಹಿಣಿಯರು ತಮ್ಮ ಮನೆಗಳಲ್ಲಿ ಅನುಕೂಲ ತಕ್ಕಂತೆ ಬಹುಸಂಖ್ಯೆಯಲ್ಲಿ 5ರಿಂದ9ದಿನಗಳ ಜಗಲಿಯ ಮೇಲೆ ದೇವಿಯ ಘಟಸ್ಥಾಪನೆ ಕೈಗೊಂಡು ನಂದಾದೀಪ ಹಚ್ಚಿದ್ದು, ದೇವಿಯ ಪೂಜೆ, ಉಪವಾಸ, ಒಂದೊತ್ತು ವೃತವನ್ನು ಐದರಿಂದ ಹನ್ನೊಂದು ಮನೆಗೆ ತೆರಳಿ ಜೋಗ ಬೇಡುವುದು, ಮತ್ತು ತಮ್ಮ ಮನೆಗೆ ಜೋಗಕ್ಕೆ ಬಂದವರಿಗೆ ನೀಡುವುವ ಮೂಲಕ ದೇವಿಯ ಹರಕೆ ತೀರಿಸಲು ಭಕ್ತಿ ಭಾವದ ಮಧ್ಯ ತಾಯಂದಿರು ಹಬ್ಬವನ್ನು ಆಚರಿಸುತ್ತಿದ್ದಾರೆ.
ಅ.11ರಂದು ತಮ್ಮ ಮನೆಗಳಲ್ಲಿ ಆಯೋಧಪೂಜೆ ಹಾಗೂ 12ರಂದು ವಿಜಯ ದಶಮಿ (ನವರಾತ್ರಿ),ದಂದು ಬೆಳ್ಳಿ ಬಂಗಾರ ವಿನಿಮಯ ಮಾಡಿಕೊಳ್ಳುವ ಮೂಲಕ ಮಹಿಳೆಯರಾಧಿಯಾಗಿ ಪುರುಷರು ಮಕ್ಕಳು ಹಬ್ಬವನ್ನು ಆಚರಿಸುವ ಮೂಲಕ ಆಚರಣೆ ಸಂಪನ್ನಗೊಳಿಸುವರು.

Leave a Reply

Your email address will not be published. Required fields are marked *

error: Content is protected !!