ಉದಯವಾಹಿನಿ,ಯಲಹಂಕ: ಭೂಮಿಯಲ್ಲಿ ಜೀವ ಅಮೂಲ್ಯವಾದ ಕೊಡುಗೆ, ಮನುಷ್ಯ ಜನ್ಮದ ಮಹತ್ವ ಕೆಲವರಿಗೆ ಇನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ಶೋಚನೀಯ… ಮನುಷ್ಯ ಭೂಮಿಗೆ ಬಂದಾಗಿನಿಂದ ಒಂದಿಲ್ಲೊಂದು ಆವಿಷ್ಕಾರ, ಹೊಸತನಗಳಿಗೆ ಮುನ್ನುಡಿ ಬರೆಯುತ್ತಿದ್ದಾನೆ. ಅದಕ್ಕೆ ಜೀವನ, ಜೀವನ ಶೈಲಿ, ಅವಶ್ಯಕತೆಗಳನ್ನು ಪೂರೈಸಲು 24 ಗಂಟೆ ಸಮಯ, ಕೈ ತುಂಬಾ ಹಣ ಇದ್ದರೂ ಸಾಲದಾಗಿದೆ.
ದುಡಿಮೆಗೆ ಅನುಗುಣವಾಗಿ ಮನುಷ್ಯ ಜೀವನ ರೂಢಿಸಿಕೊಳ್ಳುವಲ್ಲಿ ವಿಫಲನಾಗುತ್ತಿದ್ದಾನೆ. ಬೇಕು- ಬೇಡಗಳ ಪರಿಕಲ್ಪನೆಯು ಇಲ್ಲದೆ ಅವಶ್ಯಕತೆಗಳನ್ನು ಮೀರಿದ ಜೀವನಕ್ಕೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದಾನೆ.
ಅತಿ ವೇಗವಾಗಿ ಓಡುತ್ತಿರುವ ಜೀವನದಲ್ಲಿ ತಮಗೇನು ಬೇಕು ಎಂಬುದಕ್ಕಿಂತ ತಮ್ಮ ಅನುಕೂಲ, ಯೋಗ್ಯತೆ ಮರೆತು ಪರರನ್ನು ಮೆಚ್ಚಿಸಲು ಅಥವಾ ಪರರಿಗಿಂತ ನಾನೇನು ಕಮ್ಮಿ ಎಂದು ಬೀಗಲು ಹೋಗಿ ಮುಚ್ಚಿದ ಬಾಗಿಲ ಹಿಂದೆ, ದಟ್ಟ ಕಾನನದ ವೃಕ್ಷಗಳ ಕೊಂಬೆ ಸೇರಿದಂತೆ ಮತಿಬ್ರಮನಾಗಿ ಅಮೂಲ್ಯ ಜೀವನವನ್ನ ಕೈ ಚೆಲ್ಲುವ ಮೂಲಕ ತನ್ನ ಅವನತಿಯನ್ನು ತಾನೇ ಕರೆದುಕೊಂಡು ದುರಂತ ಅಂತ್ಯವಾಗುತ್ತಿದ್ದಾನೆ.
ಇದಕ್ಕೊಂದು ಸ್ಪಷ್ಟ ನಿದರ್ಶನ ಕೆಲವೆ ದಿನಗಳ ಹಿಂದೆ ಕುಟುಂಬದಲ್ಲಿ ನಡೆದ ಇಬ್ಬರು ಮಕ್ಕಳ ಕೊಂದು ದಂಪತಿ ಆತ್ಮಹತ್ಯೆ ಪ್ರಕರಣವೇ ಸಾಕ್ಷಿ.ನ್ ಅದೊಂದು ಮುದ್ದಾದ ಸಂಸಾರ… ಮನೆಯ ಹಿರಿಯಾಳು ಅಂದರೆ 33 ವರ್ಷದ ಅವಿನಾಶ್ ಒಬ್ಬ ಕಾರು ಚಾಲಕರು, ಮಡದಿ ಹತ್ತಾರು ಮಕ್ಕಳನ್ನು ತಿದ್ದಿ ಬುದ್ದಿ ಹೇಳುವ ಶಿಕ್ಷಕಿ ಮಮತಾಗೆ ಕೇವಲ 30 ವರ್ಷ, ಇವರಿಬ್ಬರದ್ದು ಸುಂದರ ಸಂಸಾರ ಎಂಬುದಕ್ಕೆ ಸಾಕ್ಷಿ ಮುದ್ದಾದ 5 ವರ್ಷದ ಆಧೀಯ ಎಂಬ ಮಗಳು ಹಾಗೂ ಮುದ್ದು ಕಂಗಳ ಅನಯಾ ಎಂಬ 3 ವರ್ಷದ ಮಗಳು ಸೇರಿದ ಕುಟುಂಬ.
