ಉದಯವಾಹಿನಿ, ಬ್ಯಾಡಗಿ: ತಾಲ್ಲೂಕಿನ ಮಲ್ಲೂರು-ಶಂಕರಿಪುರ ಮತ್ತು ಶಂಕ್ರಿಪುರ-ಕುರಬಗೊಂಡ ಮಾರ್ಗ ಮಧ್ಯದ ಹಳ್ಳಕ್ಕೆ ಅಡ್ಡಲಾಗಿ ಸಿಡಿ ನಿರ್ಮಿಸುವಂತೆ ಅಲ್ಲಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಗ್ರಾಮ ಪಂಚಾಯಿತಿ ಸದಸ್ಯ ವಿದ್ಯಾ ಬಿದರಿ ಮಾತನಾಡಿ, ‘ಎರಡೂ ಹಳ್ಳಗಳಿಗೆ ಪೈಪ್‌ಲೈನ್ ಹಾಕಲಾಗಿದೆ.
ಸ್ವಲ್ಪ ಮಳೆಯಾದರೂ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಈ ಕುರಿತು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಶಂಕ್ರಿಪುರ ಗ್ರಾಮದ ನಿವಾಸಿ ಸುಭಾಸ ಚೂರಿ ಮಾತನಾಡಿ, ‘ಗುರುವಾರ ಸುರಿದ ಮಳೆಗೆ ಸುಮಾರು 2ಗಂಟೆ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ರೈತರು, ವಿದ್ಯಾರ್ಥಿಗಳು ತೊಂದರೆಯನ್ನು ಅನುಭಸಿದರು. ಕಾಗಿನೆಲೆ ಮತ್ತು ಬ್ಯಾಡಗಿ ಸಂಪರ್ಕಿಸಲು ಇದೊಂದೆ ರಸ್ತೆಯಾಗಿದ್ದು, ಕೂಡಲೇ ಎರಡೂ ಹಳ್ಳಗಳಿಗೆ ಮೇಲ್ಸೇತುವೆ ನಿರ್ಮಿಸುವಂತೆ ಆಗ್ರಹಿಸಿದರು.
