ಉದಯವಾಹಿನಿ, ಹಳೇಬೀಡು: ಭಾರಿ ಮಳೆಗೆ ಹಳೇಬೀಡಿನ ದ್ವಾರಸಮುದ್ರ ಕೆರೆ ಕೋಡಿಯಲ್ಲಿ ಶನಿವಾರ ನೀರಿನ ಹರಿವು ಹೆಚ್ಚಾಗಿದೆ. ನೀರು ಹರಿಯುವ ವೇಗದ ಪರಿಣಾಮ ಕಾಲುವೆಗಳಿಂದ ನೀರು ರಸ್ತೆ, ಗದ್ದೆಗಳಿಗೆ ನುಗ್ಗಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ.ದ್ವಾರಸಮುದ್ರ ಕೆರೆಯ ಕೋಡಿಹಳ್ಳದ ಪಕ್ಕದ ಭೂದಿಗುಂಡಿ ಬಡಾವಣೆಯ ಮನೆಗಳು ಜಲಾವೃತವಾಗಿವೆ.
ಕಾಲುವೆ ಸ್ವಚ್ಛವಾಗಲಿ ಎಂದು ನಿವಾಸಿಗಳು ಪೇಟೆ ಕಾಲುವೆಗೆ ನೀರು ಬಿಟ್ಟಿದ್ದಾರೆ. ಕಿರಿದಾದ ನಾಲೆಗಳ ಮೂಲಕ ಹೊರ ಚೆಲ್ಲಿದ ನೀರು ಗದ್ದೆಗಳನ್ನು ಆವರಿಸಿದೆ.ಸಂಪರ್ಕ ಸ್ಥಗಿತ: ನೀರು ರಸ್ತೆ ಮೇಲೆ ಹರಿಯುತ್ತಿದ್ದು, ದ್ವಿಚಕ್ರ ವಾಹನವೂ ಚಲಿಸಲಾಗದೆ, ರೈತರು ತಮ್ಮ ಜಮೀನಿನ ಸ್ಥಿತಿಗತಿ ನೋಡಲು ಸಾದ್ಯವಿಲ್ಲದಂತಾಗಿದೆ. ಹಳೇಬೀಡು ಹಾಗೂ ಮಲ್ಲಾಪುರ ಗ್ರಾಮಸ್ಥರ ಜಮೀನುಗಳು ಹೆಚ್ಚಾಗಿದ್ದು, ಎರಡೂ ಗ್ರಾಮದ ರೈತರಿಗೆ ತೊಂದರೆ ಉಂಟಾಗಿದೆ.
