ಉದಯವಾಹಿನಿ,ದೇವದುರ್ಗ: ತಾಲೂಕಿನ ಮಸಿಹಾಳ ಗ್ರಾಮದ ಲಾಲ್‍ಸಾಬ್ ಖಾಜಾಸಾಬ್‍ಯನ್ನು ಕೊಲೆ ಮಾಡಿದ ಆರೋಪಿಗಳನ್ನು ಗಬ್ಬೂರು ಪೊಲೀಸರು 24ಗಂಟೆಯಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಾದ ರಜ್ಮಾ ಲಾಲ್‍ಸಾಬ್, ಅನ್ವರ್‍ಪಾಷಾ ಖಾಜಾಹುಸೇನ್‍ನನ್ನು ಬಂಧಿಸಲಾಗಿದೆ. ಮೇ 26ರಂದು ಸುಲ್ತಾನಪುರ ಸಮೀಪ ಲಾಲ್‍ಸಾಬ್ ಶವಪತ್ತೆಯಾಗಿತ್ತು. ಗಬ್ಬೂರು ಪೊಲೀಸರು ಪ್ರಕರಣ ದಾಖಲಾದ 24ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಂಡದಲ್ಲಿ ಪ್ರಭಾರ ಸಿಪಿಐ ಕೆ.ಹೊಸಕೇರಪ್ಪ, ಪಿಎಸ್‍ಐ ಸಿ.ಪ್ರಕಾಶ, ಸಿಬ್ಬಂದಿ ಶಾಲಂ, ಬಂದಯ್ಯ, ನರಸಪ್ಪ, ಪ್ರಕಾಶ, ವಿನೋದಕುಮಾರ, ಮಹೇಶ್ವರಿ, ಶೋಬಾ ಇತರರಿದ್ದರು.
