ಉದಯವಾಹಿನಿ,ದೇವದುರ್ಗ: ಸುಮಾರು 20 ದಿನಗಳ ಹಿಂದೆ ಕಾಣೆಯಾಗಿದ್ದ ಪಟ್ಟಣದ ಮಹಿಳೆ ಇಲ್ಲಿನ ಜೈರುದ್ದೀನ್ ಪಾಷಾ ದರ್ಗಾ ಸಮೀಪದ ಶೌಚ ಗೃಹದಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾಳೆ. ಕುಪ್ಪಮ್ಮ ನರಸಪ್ಪ ಕೊರವರ್ (37) ಮೃತ ಮಹಿಳೆ. ಅಹಮ್ಮದ್ ಸಾಬ್ ಮಾಬುಸಾಬ್ ಎನ್ನುವ ಆರೋಪಿಯನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೃತ ಮಹಿಳೆ ಕುಪ್ಪಮ್ಮ ಕಾಳುಕಡಿ ವ್ಯಾಪಾರ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ಪಟ್ಟಣಕ್ಕೆ ವ್ಯಾಪಾರಕ್ಕಾಗಿ ಬಂದಾಗ ಕಾಣೆಯಾಗಿದ್ದಾಳೆ. ಕುಪ್ಪಮ್ಮ ತಮ್ಮ ಅಮರೇಶ್ ಭೀಮಣ್ಣ ಪಟ್ಟಣ ಠಾಣೆಯಲ್ಲಿ ಕಾಣೆಯಾದ ಕುರಿತು ಪ್ರಕರಣ ದಾಖಲಿಸಿದ್ದರು. ಮೃತ ಕುಪ್ಪಮ್ಮ ಫೋನ್ ದಾಖಲೆ ಪರಿಶೀಲಿಸಿದ ಪೊಲೀಸರು, ಆರೋಪಿಯನ್ನ ಬಂಧಿಸಿ ಶವ ಪತ್ತೆ ಹಚ್ಚಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇನ್ನೊಬ್ಬ ಆರೋಪಿಯಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪಿಐ ಕೆ ಹೊಸಕೇರಪ್ಪ ತಿಳಿಸಿದ್ದಾರೆ.
