ಉದಯವಾಹಿನಿ, ಶ್ರೀನಗರ: ಜಮ್ಮು ಮತ್ತು ಕಾಶೀರದ ಗುಲ್ಮರ್ಗ್‌ನಲ್ಲಿ ನಿನ್ನೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಯೋಧರು ಹುತಾತ್ಮರಾಗಿದ್ದು, ಹೊಂಚುದಾಳಿಯಲ್ಲಿ ಸತ್ತವರ ಸಂಖ್ಯೆ ನಾಲ್ಕಕ್ಕೆ ಏರಿದೆ.ಇಬ್ಬರು ಸೇನಾ ಪೋರ್ಟರ್‌ಗಳು ಸಾವನ್ನಪ್ಪಿದ್ದು, ಇನ್ನೊಬ್ಬ ಪೋರ್ಟರ್ ಮತ್ತು ಯೋಧ ಗಾಯಗೊಂಡಿದ್ದರು. ಉತ್ತರ ಕಾಶೀರದ ಬಾರಾಮುಲ್ಲಾ ಜಿಲ್ಲೆಯ ಪ್ರವಾಸಿ ತಾಣ ಗುಲಾರ್ಗ್‌ನಿಂದ ಆರು ಕಿಲೋಮೀಟರ್ ದೂರದಲ್ಲಿ ಭಯೋತ್ಪಾದಕರು ಸೇನಾ ಪಡೆಯ ವಾಹನದ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆ ಅಫ್ರಾವತ್ ಶ್ರೇಣಿಯ ನಾಗಿನ್ ಪೋಸ್ಟ್‌ಗೆ ತೆರಳುತ್ತಿದ್ದಾಗ ಬೋಟಾ ಪತ್ರಿ ಪ್ರದೇಶದಲ್ಲಿ ಸೇನಾ ವಾಹನದ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.ಇಬ್ಬರು ಹಮಾಲಿಗಳ ಸಾವನ್ನು ದಢಪಡಿಸಿದ ಅಧಿಕಾರಿಗಳು ಗಾಯಗೊಂಡ ಯೋಧರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದರು. ದಾಳಿಗೆ ಒಳಗಾದಾಗ ವಾಹನದಲ್ಲಿದ್ದ ಸೈನಿಕರು ಪ್ರತೀಕಾರದ ಗುಂಡಿನ ದಾಳಿ ನಡೆಸಿದರು ಎಂದು ಅವರು ಹೇಳಿದ್ದಾರೆ. ಈ ಪ್ರದೇಶವು ಸಂಪೂರ್ಣವಾಗಿ ಸೇನೆಯ ಪ್ರಾಬಲ್ಯದಲ್ಲಿದೆ ಮತ್ತು ಬೇಸಿಗೆಯ ಆರಂಭದಲ್ಲಿ ಭಯೋತ್ಪಾದಕ ಗುಂಪು ನುಸುಳಿದೆ ಮತ್ತು ಅಫ್ರಾವತ್ ಶ್ರೇಣಿಯ ಎತ್ತರದ ಪ್ರದೇಶಗಳಲ್ಲಿ ಆಶ್ರಯ ಪಡೆದಿದೆ ಎಂದು ಇತ್ತೀಚೆಗೆ ವರದಿಗಳಿವೆ ಎಂದು ಅವರು ಹೇಳಿದರು. ಜಮು ಮತ್ತು ಕಾಶೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕಣಿವೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ದಾಳಿಗಳು ಗಂಭೀರ ಕಳವಳಕಾರಿ ವಿಷಯವಾಗಿದೆ.
