ಉದಯವಾಹಿನಿ ಹಾವೇರಿ : ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಇದುವರೆಗೂ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ಇದುವರೆಗೂ ನಾನು 15 ಬಾರಿ ಬಜೆಟ್ ಮಂಡನೆ ಮಾಡಿದ್ದೇನೆ. ಮುಂದೆ ಎಷ್ಟು ಬಾರಿ ಬಜೆಟ್ ಮಂಡಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಎಂದು ಕುರುಬ ಸಮುದಾಯ ಮುಖಂಡರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗಂಗೀಬಾವಿ ಬಳಿ ಕುರುಬ ಸಮುದಾಯದ ಸಭೆ ನಡೆಯುತ್ತಿದ್ದು ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ ನಾನು ಅಪ್ರಾಮಾಣೀಕನಾಗಿದ್ದರೆ ಕೋಟಿಗಟ್ಟಲೆ ಸಂಪಾದಿಸಬಹುದಿತ್ತು. ಆದರೆ ನಾನು ಆ ಕೆಲಸ ಮಾಡಿಲ್ಲ. ಇವತ್ತಿನವರೆಗೂ ನನಗೆ ಮೈಸೂರಿನಲ್ಲಿ ಒಂದು ಸ್ವಂತ ಮನೆ ಇಲ್ಲ ಎಂದು ಅವರು ತಿಳಿಸಿದರು. ಅಧಿಕಾರದಿಂದ ಇಳಿಸಬೇಕು ಅವಮಾನ ಮಾಡಬೇಕು ಎಂದು ಹುನ್ನಾರ ನಡೆಸಿದ್ದಾರೆ. ಇದಕ್ಕೆ ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ ಕೂಡ ಕೈಜೋಡಿಸಿದ್ದಾರೆ.ಬಿಜೆಪಿ ನಾಯಕರಿಗೆ ಎಚ್ ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ, ಎಚ್ ಡಿ ದೇವೇಗೌಡರ ಮಕ್ಕಳು ಹಾಗೂ ಆರ್ ಅಶೋಕ್ ಎಲ್ಲರೂ ಕೈ ಜೋಡಿಸಿದ್ದು ಇದಕ್ಕೇ ನೀವು ಉತ್ತರ ಕೊಡಬೇಕು ಎಂದು ಗಂಗಿಬಾವಿಯಲ್ಲಿ ನಡೆದ ಕುರುಬ ಸಮಾಜದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!