ಉದಯವಾಹಿನಿ
ಬೆಂಗಳೂರು: ವಕ್ಫ್ ವಿವಾದ ಕರ್ನಾಟಕದಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ರೈತರಿಗೆ ವಕ್ಫ್ ನೀಡಿರುವಂತ ನೋಟಿಸ್ ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಈ ನಡುವೆ JPC ಅಧ್ಯಕ್ಷರು ನವೆಂಬರ್.7ರಂದು ಹುಬ್ಬಳ್ಳಿ, ವಿಜಯಪುರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.ಅಲ್ಲಿನ ರೈತರೊಂದಿಗೆ ಸಂವಾದ ನಡೆಸಿ, ಅವರ ಅಹವಾಲು ಸ್ವೀಕರಿಸಲಿದ್ದಾರೆ ಎಂಬುದಾಗಿ ಸಂಸದ ತೇಜಸ್ವಿ ಸೂರ್ಯ ಮಾಹಿತಿ ಹಂಚಿಕೊಂಡಿದ್ದಾರೆ.ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಅವರು, ನವೆಂಬರ್ 7 ರಂದು ಹುಬ್ಬಳ್ಳಿ ಮತ್ತು ಬಿಜಾಪುರಕ್ಕೆ ಭೇಟಿ ನೀಡಿ ವಕ್ಫ್ನ ಲೂಟಿಕೋರ ಕ್ರಮದಿಂದ ಬಾಧಿತರಾದ ರೈತರೊಂದಿಗೆ ಸಂವಾದ ನಡೆಸಲು ನಾನು ಮಾಡಿದ ಮನವಿಗೆ ವಕ್ಫ್ ಕುರಿತ ಜೆಪಿಸಿ ಅಧ್ಯಕ್ಷರು ಸಮ್ಮತಿಸಿದ್ದಾರೆ ಎಂದು ತಿಳಿಸಿದ್ದಾರೆ.ಅಧ್ಯಕ್ಷರು ರೈತ ಸಂಘಟನೆಗಳು, ಮಠಗಳೊಂದಿಗೆ ಸಂವಾದ ನಡೆಸುತ್ತೇನೆ. ಅವರು ನೀಡುವಂತ ಮನವಿಗಳನ್ನು ಜೆಪಿಸಿ ಮುಂದೆ ಇಡಲಾಗುವುದು ಎಂಬುದಾಗಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
