ಉದಯವಾಹಿನಿ ಮೈಸೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಮೈಸೂರಿನಲ್ಲಿರುವ ಲೋಕಾಯುಕ್ತ ಕಚೇರಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ, ಸತತ 2 ಗಂಟೆಗಳ ಕಾಲ ಲೋಕಾಯುಕ್ತ ವಿಚಾರಣೆಯನ್ನು ಎದುರಿಸಿದರು. ಇದೀಗ ಲೋಕಾಯುಕ್ತ ಎಸ್ಪಿ ಆಗಿರುವ ಉದೇಶ್ಶ್ ವಿರುದ್ಧವೇ ಸ್ನೇಹಮಯಿ ಕೃಷ್ಣ ಅವರು ದೂರು ಸಲ್ಲಿಸಿದ್ದಾರೆ.ಹೌದು ಸ್ನೇಹಮಯಿ ಕೃಷ್ಣ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್​ ಕರ್ತವ್ಯಲೋಪ ಎಸಗಿದ್ದಾರೆ ಎಚ್ಚರಿಕೆ ನೀಡಿ ಎಂದು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ದೂರಿನಲ್ಲಿ ಪ್ರಕರಣದ A1 ಆರೋಪಿಯ ವಿಚಾರಣೆ ನಡೆಸಬೇಕಿತ್ತು. ಆದರೆ ಅವರನ್ನು ಬಿಟ್ಟು A2, A3 ಹಾಗೂ A4 ವಿಚಾರಣೆ ನಡೆಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.ಅಲ್ಲದೇ ಮಹಜರಿನಲ್ಲಿ ಲೋಪ, ದಾಖಲೆ ಅವರ ಬಳಿಯೇ ಇಟ್ಟುಕೊಳ್ಳಬೇಕಿತ್ತು. ಆದರೆ ಅವರ ಬಳಿ ಇಟ್ಟುಕೊಳ್ಳದೇ ಕರ್ತವ್ಯಲೋಪವೆಸಗಿದ್ದಾರೆ. ದಾಖಲೆ ಪತ್ರಕ್ಕೆ ವೈಟ್ನರ್‌ ಹಾಕಿದ ಸಂಬಂಧ ವಿಚಾರಣೆ ನಡೆಸಿಲ್ಲ. ಲೈಟ್‌ ಬಿಟ್ಟವರನ್ನು ವಿಚಾರಣೆ ಮಾಡಿಲ್ಲ, ಈ ಬಗ್ಗೆ ತನಿಖೆ ನಡೆಸಿಲ್ಲ ಎಂದಿದ್ದಾರೆ.ಸಿಬಿಐಗೆ ವಹಿಸುವಂತೆ ನಾನು ಹಾಕಿದ ಅರ್ಜಿ ಕೋರ್ಟ್​ನಲ್ಲಿ ಬರುತ್ತಿದ್ದಂತೆ ವಿಚಾರಣೆಗೆ ಕರೆದಿದ್ದಾರೆ. ಅವರ ಅಣತಿಯಂತೆ ಸಿಎಂ ಸಿದ್ದರಾಮಯ್ಯನವರೇ 10 ಗಂಟೆಯಿಂದ 12 ಗಂಟೆಯವರೆರೆ ವಿಚಾರಣೆಗೆ ಹಾಜರಾಗುತ್ತೇನೆಂದು ಸಮಯ ನಿಗದಿ ಪಡಿಸಿ ವಿಚಾರಣೆಗೆ ಬಂದಿದ್ದಾರೆ. ಅದೇ ರೀತಿ 10 ರಿಂದ 12 ಗಂಟೆಯವರೆಗೆ ವಿಚಾರಣೆ ನಡೆಸಿ ಮುಗಿಸಿದ್ದಾರೆ ಎಂದು ದೂರಿನಲ್ಲಿ ಸ್ನೇಹಮಯಿ ಕೃಷ್ಣ ಉಲ್ಲೇಖ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!