
ಉದಯವಾಹಿನಿ,ಚಿಂಚೋಳಿ: ವಿಧಾನಸಭಾ ಮತಕ್ಷೇತ್ರದ ಚೇಂಗಟಾ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯು ಸೋಮವಾರ ಜರುಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಕೆ ಆಗಿರುವುದರಿಂದ ಅಧ್ಯಕ್ಷರಾಗಿ ಅಕ್ರಂ ಇನಾಂದಾರ ಮತ್ತು ಉಪಾಧ್ಯಕ್ಷರಾಗಿ ಅವಮ್ಮ ರಮೇಶ ಕಾಂಬಳೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕಮಲಾಪುರ ತಹಸೀಲ್ದಾರ್ ಮಹ್ಮುದ್ ಮೋಸಿನ್ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಅಧ್ಯಕ್ಷ ಉಪಾಧ್ಯಕ್ಷರ ಬೆಂಬಲಿಗರು ಪಕ್ಷದ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಗ್ರಾಪಂ ಅಧ್ಯಕ್ಷ ಅಕ್ರಮ್ ಇನಾಂದಾರ ಅವರು,ಚೇಂಗಟಾ,ದುತ್ತರಗಾ,ಪಂಗರಗಾ ಎರಡು ತಾಂಡಾಗಳು ಸೇರಿದಂತೆ 19 ಸದಸ್ಯರು ಇದ್ದು ನನ್ನ ಮೇಲೆ ಎಲ್ಲಾ ಸದಸ್ಯರು ವಿಶ್ವಾಸವಿಟ್ಟು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದು ಅತ್ಯಂತ ಸಂತೋಷ ತಂದಿದೆ ಬರುವ ದಿನಗಳಲ್ಲಿ ಚೇಂಗಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಸಮಸ್ಯೆಗಳು ಮೂಲಭೂತ ಸೌಕರ್ಯಗಳು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ.ಯಾವುದೇ ಜಾತಿ ಧರ್ಮ ಪಕ್ಷಬೇಧ ಮರೆತು ಎಲ್ಲಾ ಸದಸ್ಯರ ವಾರ್ಡ್ ಗಳು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ,ಪಂಚಾಯಿತಿ ಅಭಿವೃದ್ಧಿಯೇ ನನ್ನ ಮೂಲಮಂತ್ರವಾಗಿದ್ದು ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕಮಲಾಪುರ ಗ್ರಾಪಂ.ಮಾಜಿ ಅಧ್ಯಕ್ಷ ಅಬ್ದುಲ್ ಸತ್ತಾರ,ಬಾಬುರಾವ ಭೋವಿ,ಪ್ರಕಾಶ ಭೋವಿ,ರವಿ ಯರನಳ್ಳಿ,ಅಶೋಕ ಜಾಜಿ,ಇಮ್ರಾನ್ ನಾಗೂರ,ಜಫರ್ ಇನಾಂದಾರ,ಇಮಾಮ್ ಸಾಬ ಜೀಲಾನಿಸಾಬ,ರಮೇಶ ಕಾಂಬ್ಳೆ,ಮಸ್ತಾನಸಾಬ ಖಾದಿಮ್,ವಿಶ್ವನಾಥ ಜಾಧವ,ಗುಂಡೆರಾವ ಜಾಧವ,ಮಂಜುನಾಥ್ ಕಾಬಾ,ಪ್ರಲಾದ್,ಮಸ್ತಾನ ಮುಲ್ಲಾ,ರೌಫ್ ಗುಲ್ಬರ್ಗ,ಪಾಷ ಬೇಲೂರ,ಇದ್ದರು.
